ADVERTISEMENT

ದಿನಕರ ದೇಸಾಯಿ ಪುರಸ್ಕಾರಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಅಂಕೋಲಾ: ಸ್ಥಳೀಯ ಡಾ.ದಿನಕರ ದೇಸಾಯಿ ಪ್ರತಿಷ್ಠಾನವು ತನ್ನ ಕಾವ್ಯ ಪುರಸ್ಕಾರಕ್ಕಾಗಿ ಕವನ ಸಂಕಲನಗಳನ್ನು ಆಹ್ವಾನಿಸಿದೆ.

2007 ಜನವರಿ 1ರಿಂದ 2011 ಡಿಸೆಂಬರ್31ರ ಅವಧಿಯಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕವನ ಸಂಕಲನಗಳ 3 ಪ್ರತಿಗಳನ್ನು ಪರಿಶೀಲನೆಗೆ ಕಳಿಸಬಹುದಾಗಿದೆ.  ಅತ್ಯುತ್ತಮ ಸಂಕಲನವೆಂದು ಪರಿಗಣಿಸಿದ ಕೃತಿಗೆ 10 ಸಾವಿರ ರೂಪಾಯಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.  ಪ್ರಶಸ್ತಿ ಪರಿಶೀಲನೆಗಾಗಿ ಸಂಕಲನಗಳನ್ನು ಕಳಿಸಲು ಜೂನ್ 30 ಕೊನೆಯ ದಿನ .

ಕೃತಿಗಳನ್ನು ವಿಷ್ಣು ನಾಯ್ಕ, ಕಾರ್ಯದರ್ಶಿಗಳು, ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ, `ಪರಿಮಳ~ ಅಂಬಾರಕೊಡ್ಲ, ಅಂಕೋಲಾ, ಉತ್ತರ ಕನ್ನಡ ಜಿಲ್ಲೆ - 581314 ಈ ವಿಳಾಸಕ್ಕೆ ಕಳಿಸಬಹುದು. ಹೆಚ್ಚಿನ ಮಾಹಿತಿಗೆ 9448145370  ಸಂಪರ್ಕಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.