ADVERTISEMENT

ಮೈಸೂರು ಮೃಗಾಲಯ ಪ್ರವೇಶ ಶುಲ್ಕ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 17:30 IST
Last Updated 17 ಫೆಬ್ರುವರಿ 2011, 17:30 IST

ಮೈಸೂರು: ಇಲ್ಲಿನ ಮೃಗಾಲಯ ಹಾಗೂ ಕಾರಂಜಿ ಕೆರೆ ಪ್ರಕೃತಿ ಉದ್ಯಾನದ ಪ್ರವೇಶ ಶುಲ್ಕವನ್ನು ಬರುವ ಮಾರ್ಚ್ ಒಂದರಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.
ಪ್ರಾಣಿ ಆಹಾರ ವಸ್ತುಗಳ ಬೆಲೆ ಹೆಚ್ಚಳ ಹಾಗೂ ಆಡಳಿತಾತ್ಮಕ ವೆಚ್ಚಗಳ ಹೊರೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ತಿಳಿಸಿದೆ.

ಚಾಮರಾಜೇಂದ್ರ ಮೃಗಾಲಯ ಪ್ರವೇವೇಶ ಶುಲ್ಕವನ್ನು ವಯಸ್ಕರಿಗೆ - ರೂ.30 ರಿಂದ 40ಕ್ಕೆ, ಮಕ್ಕಳಿಗೆ (12 ವರ್ಷದವರೆಗೆ) ರೂ.15 ರಿಂದ 20ಕ್ಕೆ, ವಿದೇಶೀಯರಿಗೆ - ವಯಸ್ಕರು ರೂ.30 ರಿಂದ 100ಕ್ಕೆ, ವಿದೇಶಿ ಮಕ್ಕಳಿಗೆ ರೂ.15 ರಿಂದ 50ಕ್ಕೆ ಹೆಚ್ಚಿಸಲಾಗಿದೆ.

ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಉಚಿತ, ಪ್ರಾಥಮಿಕ ಶಾಲೆ (1 ರಿಂದ 4ನೇ ತರಗತಿ) ಮಕ್ಕಳಿಗೆ ರೂ.7.50 ರಿಂದ 10ಕ್ಕೆ, 5ನೇ ತರಗತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೂ.15 ರಿಂದ 20ಕ್ಕೆ ಏರಿಸಲಾಗಿದೆ.

ಕ್ಯಾಮರಾ ಶುಲ್ಕ: ಸ್ಟಿಲ್ ಕ್ಯಾಮರಾ ರೂ.10 ರಿಂದ 20ಕ್ಕೆ. ಲಗೇಜ್ ಶುಲ್ಕ ರೂ.2 ರಿಂದ 5ಕ್ಕೆ. ಬ್ಯಾಟರಿ ಚಾಲಿತ ವಾಹನ - ವಯಸ್ಕರಿಗೆ ರೂ.80 ರಿಂದ 100ಕ್ಕೆ, ಮಕ್ಕಳು (5 ರಿಂದ 10 ವರ್ಷಗಳು) ರೂ. 40 ರಿಂದ 50ಕ್ಕೆ, ಹಿರಿಯ ನಾಗರಿಕರು ರೂ.40 ರಿಂದ 50ಕ್ಕೆ ಏರಿಸಲಾಗಿದೆ.

ಕಾರಂಜಿ ಕೆರೆ ಪ್ರಕೃತಿ ಉದ್ಯಾನ ಪ್ರವೇಶ ಶುಲ್ಕ ವಯಸ್ಕರಿಗೆ ರೂ.10 ರಿಂದ 20ಕ್ಕೆ, ಮಕ್ಕಳು ರೂ.5 ರಿಂದ 10ಕ್ಕೆ, ವಿದೇಶೀಯರು - ವಯಸ್ಕರು ರೂ.10 ರಿಂದ 50ಕ್ಕೆ, ಮಕ್ಕಳು ರೂ.5 ರಿಂದ 25ಕ್ಕೆ. ಕ್ಯಾಮರಾ ಶುಲ್ಕ ವೀಡಿಯೋ ಕ್ಯಾಮರ ರೂ. 25 ರಿಂದ 150ಕ್ಕೆ, ಸ್ಟಿಲ್ ಕ್ಯಾಮರಾ ರೂ.10 ರಿಂದ 20ಕ್ಕೆ ಏರಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.