ADVERTISEMENT

ಸಾವಯವ ಕೃಷಿಗೆ ಅನವಶ್ಯಕ ಹಣ ನೀಡಿದರೆ ವಿಧಾನಸೌಧಕ್ಕೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 17:35 IST
Last Updated 23 ಫೆಬ್ರುವರಿ 2011, 17:35 IST

ಶಿವಮೊಗ್ಗ: ಕೃಷಿ ಬಜೆಟ್‌ನಲ್ಲಿ ಸಾವಯವ ಕೃಷಿಗೆ ಅನವಶ್ಯಕವಾಗಿ ಹಣ ಮೀಸಲಿಟ್ಟರೆ ಒಂದು ಲಕ್ಷ ಜನ ರೈತರೊಂದಿಗೆ ಬಾರಿಕೋಲು ತೆಗೆದುಕೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಮುಖಂಡ ಕಡಿದಾಳು ಶಾಮಣ್ಣ ಎಚ್ಚರಿಸಿದರು.

ನಗರದ ಕರ್ನಾಟಕ ಸಂಘದಲ್ಲಿ ಬುಧವಾರ ಸ್ವಾತಂತ್ರ್ಯ ಶೀಲ ಬಳಗ ಹಮ್ಮಿಕೊಂಡಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ನೆನಪು ಕಾರ್ಯಕ್ರಮದಲ್ಲಿ ‘ಎಂಡಿಎನ್ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಕಳೆದ ಬಾರಿ ಅನವಶ್ಯಕವಾಗಿ ಸಾವಯವ ಕೃಷಿ ಹೆಸರಿನಲ್ಲಿ 140ಕೋಟಿ ರೂ. ಖರ್ಚು ಹಾಕಿದ್ದಾರೆ. ಆದರೆ, ವಾಸ್ತವವಾಗಿ ‘ಸಾವಯವ ಕೃಷಿ’ ಪದ್ಧತಿಯೇ ಅಲ್ಲ. ಅದೊಂದು ಗೊಬ್ಬರ ತಯಾರಿಸುವ ವಿಧಾನ ಅಷ್ಟೇ. ಅದಕ್ಕಾಗಿ ಕೋಟ್ಯಂತರ ರೂ.ಮೀಸಲಿಡುವ ಬದಲು, ರೈತರಿಗೆ ಬಡ್ಡಿ ರಹಿತ ಸಾಲ ನೀಡಬಹುದಿತ್ತು. ಈ ಬಾರಿಯೂ ಸರ್ಕಾರದ ಈ ವರ್ತನೆ ಮುಂದುವರಿದಲ್ಲಿ ಬಾರಿಕೋಲಿನೊಂದಿಗೆ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.