ಮಂಗಳೂರು: ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಬೇಸಿಗೆ ರಜಾ ಕಾಲದ ಮಕ್ಕಳ ಶಿಬಿರವನ್ನು ಏ. 2ರಿಂದ 8ರವರೆಗೆ ಆಯೋಜಿಸಲಾಗಿದ್ದು, ಹಳ್ಳಿ-ಪಟ್ಟಣ, ದೇಶ-ವಿದೇಶದ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಮುಕ್ತವಾಗಿ ಬೆರೆಯುವ ಅವಕಾಶವಿದೆ. ಶುಲ್ಕ ರೂ. 200 ಮಾತ್ರ. ಅವಶ್ಯಕತೆ ಇರುವವರಿಗೆ ಊಟ-ತಿಂಡಿ-ವಸತಿ ವ್ಯವಸ್ಥೆಗೆ ಪ್ರತ್ಯೇಕ ಶುಲ್ಕ.
ಥರ್ಮೊಕೋಲ್ ಆರ್ಟ್, ಪೇಪರ್ ಕ್ರಾಫ್ಟ್, ಮುಖವಾಡ ತಯಾರಿ, ಚಿತ್ರಕಲೆ, ನಾಟಕ, ನೃತ್ಯ, ಹಾಡು, ಮೂಕಾಭಿನಯ, ಟ್ರೆಕ್ಕಿಂಗ್, ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ಕಥೆ-ಕವನ ಬರವಣಿಗೆ, ಪವಾಡ ಬಯಲು, ಮ್ಯೋಜಿಕ್ ಮತ್ತು ವಿಜ್ಞಾನ, ದೃಶ್ಯ-ಶ್ರವಣ ಮಾಧ್ಯಮ ಮೂಲಕ ವಿಶೇಷ ಮಾಹಿತಿ, ಔಷಧೀಯ ಸಸ್ಯಗಳ ಪರಿಚಯ, ಸ್ಪೆಲ್ಲಿಂಗ್ ಒಲಿಂಪಿಕ್ಸ್, ವೇದಗಣಿತ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಸಿದ್ಧವಾದ ನಾಟಕ, ನೃತ್ಯ, ಹಾಡು, ಮೂಕಾಭಿನಯ, ಕಲಾತ್ಮಕ ಕೃತಿಗಳು ಏ. 8ರ ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನಗೊಳ್ಳಲಿವೆ. ಪ್ರವೇಶ ಸಂಖ್ಯೆ ಸೀಮಿತ. ನೋಂದಾಯಿಸಿಕೊಳ್ಳಲು ಕರೆಮಾಡಿ ಮೊ: 91-9945506045 (ಚಂದ್ರಶೇಖರ ದಾಮ್ಲೆ).
Email: cbdamle@gamil.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.