ADVERTISEMENT

1.56ಲಕ್ಷ ರೂ ಮೌಲ್ಯದ ಅಕ್ರಮ ಅಫೀಮು ವಶ; ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಂಟೂರ ಗ್ರಾಮದ ತೋಟದಲ್ಲಿ ಅಕ್ರಮವಾಗಿ ಬೆಳೆದಿದ್ದ 1.56 ಲಕ್ಷ ರೂಪಾಯಿ ಮೌಲ್ಯದ ಅಫೀಮು ಬೆಳೆಯನ್ನು ಭಾನುವಾರ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಮಂಟೂರ ಗ್ರಾಮದ ಮಗೆಪ್ಪಗೌಡ ಪಾಟೀಲ ಎಂಬಾತ ತನ್ನ ತೋಟದಲ್ಲಿ ಉಳ್ಳಾಗಡ್ಡಿ ಜೊತೆಗೆ ಬೆಳೆದಿದ್ದ 460 ಅಕ್ರಮ ಅಫೀಮು ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ತಹಶೀಲ್ದಾರ ಬಿ.ಡಿ.ಗುಗ್ಗರಟ್ಟಿ, ಸಿಪಿಐ ಶ್ರೀಪಾದ ಜಲ್ದೆ, ಪಿಎಸ್‌ಐ ಅರುಣ ಮುರ ಗುಂಡಿ ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.