ADVERTISEMENT

ಅಂಧರಿಗೆ ವಿದ್ಯಾದಾನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 9:35 IST
Last Updated 3 ಮಾರ್ಚ್ 2011, 9:35 IST
ಅಂಧರಿಗೆ ವಿದ್ಯಾದಾನ
ಅಂಧರಿಗೆ ವಿದ್ಯಾದಾನ   

ಜಮಖಂಡಿ: ತಮ್ಮ ತುಲಾಭಾರದಿಂದ ಬರುವ ಹಣವನ್ನು ಗದುಗಿನ ವಿರೇಶ್ವರ ಪುಣ್ಯಾಶ್ರಮದ ಅಂಧ ಅನಾಥ ಮಕ್ಕಳ ಅನ್ನ, ವಸ್ತ್ರ ಹಾಗೂ ವಿದ್ಯಾದಾನಕ್ಕಾಗಿ ಬಳಸಿಕೊಳ್ಳುವುದಾಗಿ ಡಾ. ಪುಟ್ಟರಾಜ ಗವಾಯಿಗಳವರ ಶಿಷ್ಯ ಹಾಗೂ ಆಶ್ರಮದ ಪೀಠಾಧಿಕಾರಿ ಕಲ್ಲಯ್ಯಜ್ಜನವರು ನುಡಿದರು. ಇಲ್ಲಿನ ಎಪಿಎಂಸಿ ಆವರಣದಲ್ಲಿ ಜಮಖಂಡಿಯ ಅಯ್ಯಪ್ಪಸ್ವಾಮಿ ಭಕ್ತರು ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ತಮ್ಮ 17ನೇ ತುಲಾಭಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಜೀವನ ಸಾರ್ಥಕ ಆಗಬೇಕು. ಆದರೆ ಸ್ವಾರ್ಥಕ ಆಗಬಾರದು. ಆ ನಿಟ್ಟಿನಲ್ಲಿ ಅಂಧರ ಬದುಕಿಗೆ ಬೆಳಕು ನೀಡುವ ಡಾ.ಪುಟ್ಟರಾಜ ಗವಾಯಿಗಳ ನಿಸ್ವಾರ್ಥ ಕಾರ್ಯವನ್ನು ತಾವೂ ಮುಂದುವರಿಸುವುದಾಗಿ ಹೇಳಿದರು. ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಜಗದೀಶ ಗುಡಗುಂಟಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿದ್ದು ದಿವಾನ ಮಾತನಾಡಿ, ಲಿಂ.ಡಾ.ಪುಟ್ಟರಾಜ ಗವಾಯಿಗಳು ತಮ್ಮ ಒಳಗಣ್ಣನ್ನು ಸದಾ ತೆರೆದಿಟ್ಟಿದ್ದರು ಎಂದರು.

ಓಲೆಮಠದ ಡಾ.ಚನ್ನಬಸವ ಶ್ರೀಗಳು, ಕಲ್ಯಾಣಮಠದ ಗೌರಿಶಂಕರ ಶ್ರೀಗಳು, ಮುತ್ತಿನಕಂತಿಮಠದ ಶಿವಲಿಂಗ ಶ್ರೀಗಳು, ಮರೇಗುದ್ದಿಯ ಗುರುಪಾದ ಶ್ರೀಗಳು, ಕೊಣ್ಣೂರಿನ ಪ್ರಭುದೇವರು ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಆರ್.ಎಂ. ಕಲೂತಿ, ಜಿ.ಪಂ. ಮಾಜಿ ಉಪಧ್ಯಕ್ಷ ಸುಶೀಲಕುಮಾರ ಬೆಳಗಲಿ, ಸುರೇಶ ಕಡಕೋಳ, ಮಹಾದೇವ ಇಟ್ಟಿ, ಶ್ರೀಶೈಲ ಕುಂಬಾರ, ಅರುಣ ತೋರತ, ರಮೇಶ ಇಂಗಳಗಾಂವಿ, ಟಿ.ಎ. ಬಿರಾದಾರ ಉಪಸ್ಥಿತರಿದ್ದರು.ಅಮೃತಾ ಶಿಂಧೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಹಾದೇವ ಆಲಬಾಳ (ಗುರುಸ್ವಾಮಿ) ಸ್ವಾಗತಿಸಿದರು. ಮುಖ್ಯಾಧ್ಯಾಪಕ ಎ.ಎಂ. ಕಮಲಾಕರ ನಿರೂಪಿಸಿದರು. ವೀರೇಶ ಕಲಾದಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.