ADVERTISEMENT

ಗಮನ ಸೆಳೆದ ಚಿತ್ರಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 11:37 IST
Last Updated 22 ಜೂನ್ 2013, 11:37 IST
ಗುಳೇದಗುಡ್ಡದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 3ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಚಿತ್ರಕಲಾ ಪ್ರದರ್ಶನವನ್ನು ಸಾಹಿತಿಗಳು ಹಾಗೂ ಶಾಲಾ ಮಕ್ಕಳು ವೀಕ್ಷಿಸಿದರು.
ಗುಳೇದಗುಡ್ಡದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 3ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಚಿತ್ರಕಲಾ ಪ್ರದರ್ಶನವನ್ನು ಸಾಹಿತಿಗಳು ಹಾಗೂ ಶಾಲಾ ಮಕ್ಕಳು ವೀಕ್ಷಿಸಿದರು.   

ಗುಳೇದಗುಡ್ಡ: ಇಲ್ಲಿನ ಕರನಂದಿ ಅವರ ಶಿವಕೃಪಾ ರಂಗ ಮಂದಿರದಲ್ಲಿ ಇತ್ತೀಚೆಗೆ ನಡೆದ ಬಾದಾಮಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಹಮ್ಮಿಕೊಂಡಿದ್ದ ಚಿತ್ರಕಲಾ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆದವು.

ಚಿತ್ರಕಲಾ ಪ್ರದರ್ಶನದಲ್ಲಿ ಕಿತ್ತಲಿ ಗ್ರಾಮದ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಕೇಶಪ್ಪ ಶಂಕ್ರಪ್ಪ ರಾಠೋಡ ಅವರ ಆಧ್ಯಾತ್ಮಿಕ, ಪೌರಾಣಿಕ, ನಿಸರ್ಗ, ಮಾಡರ್ನ್ ಆರ್ಟ್ ಕಲಾಕೃತಿಗಳು ಪ್ರೇಕ್ಷಕರ ಮೆಚ್ಚುಗೆ ಪಡೆದವು.

ಕೋಟೆಕಲ್ ಗ್ರಾಮದ ಯುವ ಶಿಲ್ಪ ಕಲಾವಿದ ರಂಗನಾಥ ಕಂಬಾರ ಅವರ ಸಾಂಪ್ರದಾಯಿಕ ಶಿಲ್ಪ ಮೂರ್ತಿಗಳು, ಚಿತ್ರಕಲಾ ಶಿಕ್ಷಕ ಮಲ್ಲೇಶ ತುಂಬರಮಟ್ಟಿ, ಜಿ.ಆರ್. ದೊಡಕುಂಡಿ, ವಿ.ಪಿ. ಚೋಳಾ, ದೀಪಕ ಜಗತಾಪ, ವೆಂಕಟೇಶ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಎಂ.ಎಂ. ಜಗತಾಪ ಹಾಗೂ ನಗರದ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳ ನಿಸರ್ಗ, ತೈಲವರ್ಣ ಕಲಾಕೃತಿಗಳು ಹಾಗೂ ಪ್ರಕೃತಿ ಚಿತ್ರಗಳಾದ ಗಿಡ, ಮರ ಮತ್ತು ಪ್ರಾಣಿ, ಪಶು, ಪಕ್ಷಿಗಳು. ಜಲವರ್ಣಗಳ ಚಿತ್ರ ಕಲಾಕೃತಿಗಳು ಪ್ರೇಕ್ಷಕರ ಗಮನ ಸೆಳೆದವು.

ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಮಾಜಿ ಶಾಸಕ ರಾಜಶೇಖರ ಶೀಲವಂತ, ಮಹಾಂತೇಶ ಮಮದಾಪೂರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನಮಂತ ಮಾವಿನಮರದ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಿ.ಆರ್. ತುಕಾರಾಂ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಗೌರವ ಕಾರ್ಯದರ್ಶಿ ಅಬ್ಬಾಸ್ ಮೇಲಿನಮನಿ, ತಾಲೂಕ ಕಸಾಪ ಘಟಕದ ಅಧ್ಯಕ್ಷ ಶಂಕರ ಹೂಲಿ, ಕರವೇ ಅಧ್ಯಕ್ಷ ರವಿ ಅಂಗಡಿ ಹಾಗೂ ಸಾಹಿತಿಗಳು, ಕಲಾವಿದರು. ಶಾಲಾ ಮಕ್ಕಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.