ADVERTISEMENT

ದೂರವಾಣಿ ಕರೆಗಳ ಕದ್ದಾಲಿಕೆ: ಆಲಂಪಾಷಾ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 10:03 IST
Last Updated 24 ಡಿಸೆಂಬರ್ 2013, 10:03 IST

ಬಾಗಲಕೋಟೆ: ‘ರಾಜ್ಯ ಸರ್ಕಾರ ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದೆ’ ಎಂದು ಬೆಂಗಳೂರಿನ ಉದ್ಯಮಿ ಆಲಂಪಾಷಾ ಆರೋಪಿಸಿದರು.

‘ದೂರವಾಣಿ ಕದ್ದಾಲಿಕೆ ಮಾಡುತ್ತಿ­ರುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಈಗಾಗಲೇ ರಾಜ್ಯಪಾಲರು ಮತ್ತು ಗೃಹಕಾರ್ಯದರ್ಶಿಗಳಿಗೆ ದೂರು ನೀಡಿದ್ದೇನೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಾಜಿ ಮುಖ್ಯಮಂತ್ರಿ ಬಿ.ಎಸ್‌.­ಯಡಿಯೂರಪ್ಪ, ಮಾಜಿ ಸಚಿವ ಮುರುಗೇಶ ನಿರಾಣಿ ಅವರು ನಡೆಸಿರುವ ಭ್ರಷ್ಟಾಚಾರ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ­ಜಾಗೃತಿಗಾಗಿ ಪ್ರಚಾರ ನಡೆಸಿದ್ದೇ, ಈ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ನನ್ನಿಂದ ಸಾಕಷ್ಟು ಅನುಕೂಲ­ವಾಗಿದೆ. ಆದರೆ, ಪ್ರಸ್ತುತ ಕಾಂಗ್ರೆಸ್‌ ಮುಖಂಡರು ಸ­ರ್ಕಾ­ರದ ಉನ್ನತ  ಅಧಿಕಾರಿಗಳ ಮೂ­ಲಕ ನನಗೆ ಅನ­ಗತ್ಯ ಕಿರುಕುಳ ನೀಡು­ತ್ತಿದ್ದಾರೆ’ ಎಂದು ಆರೋಪಿ­ಸಿದರು.

‘ಸುಳ್ಳು ದೂರು­ಗಳನ್ನು ನನ್ನ ವಿರುದ್ಧ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ನನ್ನ ವಿರುದ್ಧದ ಅನೇಕ ಪ್ರಕರಣಗಳು ಸುಳ್ಳು ಎಂದು ಕೆಳಹಂತದ ನ್ಯಾಯಾಲ­ಯದಲ್ಲಿ ಸಾಬೀತಾಗಿದ್ದರೂ ಕೂಡ ಅದೇ ಪ್ರಕರಣಗಳನ್ನು ಇಟ್ಟುಕೊಂಡು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮೂಲಕ ಅನಗತ್ಯ ತೊಂದರೆ ನೀಡುತ್ತಿದ್ದಾರೆ, ಸಾವಿರಾರು ಕೋಟಿಯ ನನ್ನ ವ್ಯವಹಾರಗಳಿಗೆ ಅಡಚಣೆ ಮಾಡುವ ಮೂಲಕ ನನ್ನನ್ನು ಮುಗಿಸಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.