ADVERTISEMENT

ಮೇಲ್ಸೇತುವೆಗಾಗಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 9:50 IST
Last Updated 7 ಅಕ್ಟೋಬರ್ 2011, 9:50 IST

ಇಳಕಲ್: ನಗರದ ಬಸವೇಶ್ವರ ವೃತ್ತದ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ಇಲ್ಲವೇ ಅಂಡರ್‌ಪಾಸ್ ನಿರ್ಮಿಸಬೇಕೆಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.

ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದ್ದು, ರಸ್ತೆ ವಿಶಾಲವಾಗಿ ವಾಹನಗಳು ವೇಗವಾಗಿ ಸಾಗುತ್ತಿವೆ. ಹೆದ್ದಾರಿಯ ಪೂರ್ವ ಹಾಗೂ ಉತ್ತರ ಭಾಗದಲ್ಲಿರುವ ಕೆಎಚ್‌ಡಿಸಿ ಕಾಲೊನಿ, ನೇಕಾರ ಕಾಲೊನಿ, ಜೆ.ಬಿ.ಆಸ್ಪತ್ರೆ ಕಾಲೊನಿ, ವಿದ್ಯಾಗಿರಿಯ ಸುಮಾರು 8 ಸಾವಿರ ಜನರಿಗೆ ಸುರಕ್ಷಿತವಾಗಿ ರಸ್ತೆ ದಾಟಲು ಸಾಧ್ಯ ವಾಗುವುದಿಲ್ಲ ಎಂದು ಅವರು ದೂರಿದರು.

ಸ್ಥಳಕ್ಕಾಗಮಿಸಿದ ಶಾಸಕ ದೊಡ್ಡನ ಗೌಡ ಪಾಟೀಲ, ಈ ಕುರಿತು ಹಲವು ಬಾರಿ ನವದೆಹಲಿಗೆ ತೆರಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿ ಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.


ತಾಲ್ಲೂಕಿನ ಅಮರಾವತಿ ಕ್ರಾಸ್, ಗೋರಬಾಳ ಕ್ರಾಸ್ ಹಾಗೂ ಬಸ ವೇಶ್ವರ ವೃತ್ತದ ಹತ್ತಿರ ಜನರು ಸುರ ಕ್ಷಿತವಾಗಿ ರಸ್ತೆ ದಾಟಲು ಪರ್ಯಾಯ ಮಾರ್ಗ ಮಾಡಿಕೊಡಲು ಒತ್ತಾಯಿಸಲಾಗಿದೆ, ಮತ್ತೆ ಸದ್ಯದಲ್ಲೇ ನವದೆಹಲಿಗೆ ತೆರಳಿ ಸಂಸದರು, ಸಚಿವರ ಮೂಲಕ ಒತ್ತಡ ಹಾಕುವುದಾಗಿ ಅವರು ಹೇಳಿದರು.
ರಸ್ತೆ ಕಾಮಗಾರಿಯ ಗುತ್ತಿಗೆ ದಾರರಿಗೆ ಹಾಗೂ ಅಧಿಕಾರಿಗಳಿಗೆ ಕರೆ ಮಾಡಿ, ಕೂಡಲೇ ಈ ಮೂರು ಕಡೆ ಕೆಲಸ ಸ್ಥಗಿತಗೊಳಿಸುವಂತೆ ತಾಕೀತು ಮಾಡಿದರು.

ನೇಕಾರ ಕಾಲೊನಿಯ ನಿವಾಸಿಗಳು ಮಾತನಾಡಿ ಸುತ್ತಲಿನ ಬಡಾವಣಿಗಳ ಜನರು ಪ್ರತಿನಿತ್ಯ ರಸ್ತೆ ದಾಟಲು ಪರ ದಾಡುತ್ತಿದ್ದಾರೆ ಎಂದು ಹೇಳಿದರು. ಬೇಡಿಕೆ ಈಡೇರದಿದ್ದಲ್ಲಿ ಇಡೀ ದಿನ ಹೆದ್ದಾರಿ ತಡೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು. 

 ಬಿ.ಎಸ್.ಪಾಟೀಲ ಸರ್ಜಾಪೂರ, ಶಿವಾನಂದ ರೂಳಿ, ಪ್ರೊ.ಬಿ.ಎಂ. ಹೊಸಮನಿ, ಎಸ್.ಬಿ.ಗೌಡರ, ರಾಜು ಇಲಾಳ, ರವಿ ಸಿಂದಗಿ, ಕುಮಾರ ಗಂಗಾ ಧರಮಠ, ರಾಘು ರಾಜಾಪೂರ, ಬಸನ ಗೌಡ ಗೌಡರ, ಸೋಮಶೇಖರ ಕಾಟಾ ಪುರಮಠ ಮತ್ತಿತರರು ಪಾಲ್ಗೊಂಡಿ ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT