ADVERTISEMENT

ನಾಲ್ಕು ನಾಮಪತ್ರ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 16:20 IST
Last Updated 24 ಆಗಸ್ಟ್ 2021, 16:20 IST
ಮಹಾಲಿಂಗಪುರ ಪುರಸಭೆ ಕಚೇರಿಯಲ್ಲಿ ಚುನಾವಣಾಧಿಕಾರಿ ಟಿ.ಎಚ್.ಕಟ್ಟಿಮನಿ ನಾಮಪತ್ರಗಳ ಪರಿಶೀಲನೆ ನಡೆಸಿದರು. ಸಹಾಯಕ ಚುನಾವಣೆ ಅಧಿಕಾರಿ ಆರ್.ಎಚ್.ಭೋಜನ್ನವರ ಇದ್ದಾರೆ
ಮಹಾಲಿಂಗಪುರ ಪುರಸಭೆ ಕಚೇರಿಯಲ್ಲಿ ಚುನಾವಣಾಧಿಕಾರಿ ಟಿ.ಎಚ್.ಕಟ್ಟಿಮನಿ ನಾಮಪತ್ರಗಳ ಪರಿಶೀಲನೆ ನಡೆಸಿದರು. ಸಹಾಯಕ ಚುನಾವಣೆ ಅಧಿಕಾರಿ ಆರ್.ಎಚ್.ಭೋಜನ್ನವರ ಇದ್ದಾರೆ   

ಮಹಾಲಿಂಗಪುರ: ಸ್ಥಳೀಯ ಪುರಸಭೆ 3ನೇ ವಾರ್ಡ್ ಉಪಚುನಾವಣೆಗೆ ಸಲ್ಲಿಕೆಯಾಗಿದ್ದ 6 ನಾಮಪತ್ರಗಳ ಪೈಕಿ ಎರಡು ತಿರಸ್ಕೃತಗೊಂಡಿವೆ. ನಾಲ್ಕು ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಟಿ.ಎಚ್.ಕಟ್ಟಿಮನಿ ತಿಳಿಸಿದ್ದಾರೆ.

ಐವರು ಅಭ್ಯರ್ಥಿಗಳು ಸಲ್ಲಿಸಿದ್ದ ಆರು ನಾಮಪತ್ರಗಳ ಪರಿಶೀಲನೆ ಕಾರ್ಯ ಮಂಗಳವಾರ ನಡೆಯಿತು. ಪಕ್ಷೇತರ ಅಭ್ಯರ್ಥಿಯಾಗಿ ಸಜನಸಾಬ ಪೆಂಡಾರಿ ಅವರು ಸಲ್ಲಿಸಿದ ಎರಡು ನಾಮಪತ್ರಗಳು ಅಂಗೀಕಾರವಾದರೂ ಒಂದು ನಾಮಪತ್ರವನ್ನು ಮಾತ್ರ ಅಂಗೀಕರಿಸಲಾಯಿತು.

ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದ ಸಾಲಿಯಾಬಾನು ಸೌದಾಗರ ಹಾಗೂ ಮುಸ್ತಾ
ಕಅಹ್ಮದ ಸೌದಾಗರ ಅವರಲ್ಲಿ ಸಾಲಿಯಾಬಾನು ಸೌದಾಗರ ಅನುಮೋದನೆ ಪಡೆದ ಅಭ್ಯರ್ಥಿಯಾಗಿದ್ದರಿಂದ ಅವರ ನಾಮಪತ್ರ ಅಂಗೀಕರಿಸಲಾಯಿತು. ಮುಸ್ತಾಕ್‌ ಅಹ್ಮದ ಸೌದಾಗರ ಬದಲಿ ಅಭ್ಯರ್ಥಿಯಾಗಿದ್ದರಿಂದ ಅವರ ನಾಮಪತ್ರ ತಿರಸ್ಕೃತಗೊಂಡಿತು.

ADVERTISEMENT

ಉಳಿದಂತೆ ಜೆಡಿಎಸ್‌ನಿಂದ ರಾಮು ಬಾಬು ಪಾತ್ರೋಟ,
ಪಕ್ಷೇತರ ಅಭ್ಯರ್ಥಿಯಾಗಿ ಸುರೇಶ ವಿಠ್ಠಲ ಸಣ್ಣಕ್ಕಿ ಸಲ್ಲಿಸಿರುವ ನಾಮಪತ್ರಗಳು ಕ್ರಮಬದ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.