ADVERTISEMENT

ಬೀಳಗಿ: ತಂಪೆರೆದ ಅಕಾಲಿಕ ಮಳೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 9:27 IST
Last Updated 12 ಫೆಬ್ರುವರಿ 2018, 9:27 IST

ಬೀಳಗಿ: ಬೀಳಗಿ ಪಟ್ಟಣದಲ್ಲಿ ಭಾನುವಾರ ಸಂಜೆ ಕೆಲ ಹೊತ್ತು ಮಳೆ ಸುರಿಯಿತು. ಇದರಿಂದ ತಂಪು ವಾತಾವರಣ ಒಡಮೂಡಿತು. ಮುಂಜಾನೆ ನಿರಾಣಿ ಪರಿವಾರದ ಮದುವೆ ಸಮಾರಂಭದಲ್ಲಿ ಮುಳುಗಿದ್ದ ಬೀಳಗಿ ಪಟ್ಟಣ ಮಧ್ಯಾಹ್ನದ ನಂತರ ಕೆಲ ಹೊತ್ತು ಗುಡುಗು–ಮಿಂಚಿನ ಆರ್ಭಟದೊಂದಿಗೆ ಸುರಿದ ಮಳೆಯಿಂದ ಮಿಂದೆದ್ದಿತು.

ಸುಮಾರು 20 ನಿಮಿಷ ಕಾಲ ವರುಣರಾಯ ಆರ್ಭಟಿಸಿದ. ಇದರಿಂದ ರಸ್ತೆ ಚರಂಡಿಗಳಲ್ಲಿ ನೀರು ಹರಿಯಿತು. ಬೀಳಗಿ ಬಸ್ ನಿಲ್ದಾಣದ ಸಮೀಪ ಜಿಎಲ್‌ಬಿಸಿ ಕಚೇರಿಯ ಮುಂದಿನ ಮುಖ್ಯ ರಸ್ತೆಯಲ್ಲಿ ನೀರು ಹರಿದು ಬಂದಿತು. ಇದರಿಂದ ಪ್ರಯಾಣಿಕರು, ಪಾದಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸಿದರು.

ಬಾಗಲಕೋಟೆ ವರದಿ: ನವನಗರ, ವಿದ್ಯಾಗಿರಿ ಭಾಗದಲ್ಲಿ 10 ನಿಮಿಷ ಕಾಲ ಸುರಿದ ಮಳೆಯಿಂದಾಗಿ ಮಣ್ಣಿನ ಘಮಲು ಪಸರಿಸಿತು. ಮಳೆ ಸುರಿದ ವೇಳೆ ತಂಪು ಎನಿಸಿದರೂ ಸಂಜೆಯ ವೇಳಗೆ ಸೆಕೆ ಹೆಚ್ಚಳವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.