ADVERTISEMENT

ಮಹಾಲಿಂಗಪುರ | 'ಶಾಂತಿಯುತ ಬಕ್ರೀದ್ ಆಚರಣೆಗೆ ಮನವಿ'

​ಪ್ರಜಾವಾಣಿ ವಾರ್ತೆ
Published 27 ಮೇ 2025, 14:21 IST
Last Updated 27 ಮೇ 2025, 14:21 IST
ಮಹಾಲಿಂಗಪುರದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಿನ್ನೆಲೆ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಡಿವೈಎಸ್‍ಪಿ ಜಮೀರ್ ರೋಷನ್ ಮಾತನಾಡಿದರು
ಮಹಾಲಿಂಗಪುರದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಿನ್ನೆಲೆ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಡಿವೈಎಸ್‍ಪಿ ಜಮೀರ್ ರೋಷನ್ ಮಾತನಾಡಿದರು   

ಮಹಾಲಿಂಗಪುರ: ‘ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು’ ಎಂದು ಜಮಖಂಡಿ ಡಿವೈಎಸ್‍ಪಿ ಜಮೀರ್ ರೋಷನ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು.‌‌

‘ಮಹಾಲಿಂಗಪುರವು ಸಾಮರಸ್ಯಕ್ಕೆ ಹೆಸರಾಗಿದೆ. ಅಂಥ ಹೆಸರಿಗೆ ಚ್ಯುತಿಯಾಗದಂತೆ ಹಬ್ಬ ಆಚರಿಸಬೇಕು. ಕಾನೂನು ಪಾಲನೆ ಮಾಡದಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ADVERTISEMENT

ಸಿಪಿಐ ಸಂಜೀವ ಬಳೆಗಾರ, ಮಹಾಲಿಂಗಪುರ ಪಿಎಸ್‍ಐ ಕಿರಣ ಸತ್ತಿಗೇರಿ, ಅಪರಾಧ ವಿಭಾಗದ ಪಿಎಸ್‍ಐ ಮಧು.ಎಲ್., ಬನಹಟ್ಟಿ ಪಿಎಸ್‍ಐ ಶಾಂತಾ ಹಳ್ಳಿ, ಅಪರಾಧ ವಿಭಾಗದ ಪಿಎಸ್‍ಐ ವಿಜಯ ಕಾಂಬಳೆ, ತೇರದಾಳ ಪಿಎಸ್‍ಐ ಅಪ್ಪಣ್ಣ ಐಗಳಿ ಇದ್ದರು.

ಜಮೀರ್ ಯಕ್ಸಂಬಿ, ನಜೀರ್ ಅತ್ತಾರ, ಶಂಕರಗೌಡ ಪಾಟೀಲ, ಅಶೋಕ ಅಂಗಡಿ, ಫಾರೂಕ್ ಪಕಾಲಿ ಮಾತನಾಡಿದರು. ಮುಸ್ಲಿಂ ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.