ADVERTISEMENT

ಬಾಗಲಕೋಟೆ | ಮಣ್ಣು ಕುಸಿತ: ಒಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 7:24 IST
Last Updated 18 ಜುಲೈ 2025, 7:24 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬಾಗಲಕೋಟೆ: ತಾಲ್ಲೂಕಿನ ಮುಗಳೊಳ್ಳಿ ಎಲ್‌ಟಿ 2 ಗ್ರಾಮದ ಬಳಿ ಗುರುವಾರ ರೈಲ್ವೆ ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಒಬ್ಬರು ಮೃತರಾಗಿದ್ದು, ಇಬ್ಬರಿಗೆ ಗಾಯಗಳಾಗಿವೆ.

ADVERTISEMENT

ವಿಜಯಪುರ ಜಿಲ್ಲೆಯ ನಿಡಗುಂದಿಯ ರುದ್ರೇಶ ದುಂಡಿನಮನಿ (42) ಮೃತರು. ಹಣಮಂತ, ಭೀಮಶಿ ಮಾದರ ಗಾಯಗೊಂಡಿದ್ದಾರೆ. ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸೆಂಟ್ರಿಂಗ್‌ ಕೆಲಸ ಮಾಡುವಾಗ ಎತ್ತರದಲ್ಲಿ ಹಾಕಿದ್ದ ಮಣ್ಣು ಇವರ ಮೇಲೆ ಕುಸಿದಿದೆ. ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.