ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ರೈತ ಸಮುದಾಯದಲ್ಲಿ ಹರ್ಷ ಉಂಟುಮಾಡಿದೆ.
ಮಂಗಳವಾರ, ಬುಧವಾರ ಸಂಜೆ ಬಿರುಸಿನ ಮಳೆಯಾದರೆ ಗುರುವಾರ ಸಂಜೆಯೂ ಉತ್ತಮ ಮಳೆಯಾಯಿತು. ಈ ಭಾಗದಲ್ಲಿ ಬಹಳ ದಿನಗಳಿಂದ ಮಳೆ ಇಲ್ಲದೆ ಜನರು ತೊಂದರೆ ಅನುಭವಿಸುವಂತಾಗಿತ್ತು.
ಮಳೆ ಇಲ್ಲದ ಕಾರಣಕ್ಕೆ ಕಬ್ಬು ಮತ್ತು ಅರಿಸಿನ ಬೆಳೆಗೆ ದೊಣ್ಣೆ ರೋಗ ಬಾಧಿಸಿತ್ತು. ಮೂರು ದಿನಗಳಿಂದ ಸುರಿದ ಹದವಾದ ಮಳೆಯು ಬೆಳೆಗೆ ಅನುಕೂಲಕರವಾಗಿದೆ ಎನ್ನುತ್ತಾರೆ ಸ್ಥಳೀಯ ರೈತ ಸಿದ್ದು ಗೌಡಪ್ಪನವರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.