ADVERTISEMENT

ಹಿರೇ ಓತಗೇರಿ ಗ್ರಾ.ಪಂಗೆ ಗಾಂಧಿ ಗ್ರಾಮ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 15:59 IST
Last Updated 11 ಏಪ್ರಿಲ್ 2025, 15:59 IST
ಇಳಕಲ್ ತಾಲ್ಲೂಕು ಹಿರೇಓತಗೇರಿಯ ಗ್ರಾಮ ಪಂಚಾಯ್ತಿ ಕಾರ್ಯಾಲಯ.
ಇಳಕಲ್ ತಾಲ್ಲೂಕು ಹಿರೇಓತಗೇರಿಯ ಗ್ರಾಮ ಪಂಚಾಯ್ತಿ ಕಾರ್ಯಾಲಯ.   

ಇಳಕಲ್ : ತಾಲ್ಲೂಕಿನ ಹಿರೇಓತಗೇರಿ ಗ್ರಾಮ ಪಂಚಾಯಿತಿಯು 2023-24ರ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಸರ್ಕಾರದ ಯೋಜನೆಗಳು ಹಾಗೂ ಸ್ಥಳೀಯ ಸಂಪನ್ಮೂಲಗಳ ಕ್ರೋಡೀಕರಣ ಮಾಡಿ ಗ್ರಾಮ ಪಂಚಾಯ್ತಿಯು ತನ್ನ ವ್ಯಾಪ್ತಿಯ ಗ್ರಾಮಗಳನ್ನು ಅಭಿವೃದ್ಧಿಪಡಿಸಿದ್ದಕ್ಕೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

'ಗ್ರಾಮ ಪಂಚಾಯ್ತಿಯು ಉತ್ತಮ ಗ್ರಂಥಾಲಯ ಹೊಂದಿದೆ. ಕಚೇರಿಯು ಡಿಜಿಟಲೀಕರಣಗೊಂಡಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪಿಡಿಒ ಹಾಗೂ ಸಿಬ್ಬಂದಿ ಸಮರ್ಪಕ ಸೇವೆ ನೀಡುತ್ತಿದ್ದಾರೆ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ನಮ್ಮ ಗ್ರಾಮ ಪಂಚಾಯ್ತಿ ಆಯ್ಕೆಯಾಗಿರುವುದು ಸಂತಸ ತಂದಿದೆ' ಎಂದು ಅಧ್ಯಕ್ಷ ರಾಮಚಂದ್ರಪ್ಪ ಮಾದರ ಹೇಳಿದರು.

‘ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಆಗಿರುವ ಸಂತಸ ಒಂದೆಡೆಯಾದರೆ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಹಕಾರ ಹಾಗೂ ಸಿಬ್ಬಂದಿ ಪರಿಶ್ರಮದಿಂದ ಇದೆಲ್ಲ ಸಾಧ್ಯವಾಗಿದೆ’ ಎನ್ನುತ್ತಾರೆ ಹಿರೇಓತಗೇರಿ ಗ್ರಾಮ ಪಂಚಾಯಿತಿ ಪಿಡಿಒ ಗಂಗಾಧರ ಹನಮಸಾಗರ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.