ಬಾಗಲಕೋಟೆ: ದಾರಿಯಲ್ಲಿ ಕಳೆದುಕೊಂಡಿದ್ದ ಹಣವು ಪೊಲೀಸರು ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಿಂದ ಮರಳಿ ಕಳೆದುಕೊಂಡವರಿಗೆ ಸಿಕ್ಕಿದೆ.
ಕಾಳಿದಾಸ ವೖತ್ತದಲ್ಲಿರುವ ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದಲ್ಲಿ ₹15 ಸಾವಿರ ಹಣ ಪಡೆದ ರಂಗನಗೌಡ ದಂಡಣ್ಣವರ, ಬಸವೇಶ್ವರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿಗೆ ಹಣ ತುಂಬಲು ಹೋಗಿದ್ದರು.
ಹಣ ತುಂಬಲು ನೋಡಿದಾಗ ಕಿಸೆಯಲ್ಲಿ ಹಣವಿರಲಿಲ್ಲ. ಕೂಡಲೇ ತಿರುಗಿ ಪ್ರಗತಿ ಸಂಘಕ್ಕೆ ಹೋಗಿ ವಿಚಾರಿಸಿದಾಗ ಅಟೆಂಡರ್ ಪುನೀತ್ ಘಾಟಗೆ ಹಾಗೂ ಪಕ್ಕದ ಅಂಗಡಿ ಕೆಲಸಗಾರರು ರಸ್ತೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಣ ಆರಿಸಿಕೊಳ್ಳುತ್ತಿದ್ದರು. ಅವರದ್ದೆಂದು ನಾವೂ ಆರಿಸಿಕೊಟ್ಟೆವು. ಸ್ಕೂಟರ್‌ನಲ್ಲಿ ಹೋದರು ಎಂದು ತಿಳಿಸಿದರು.
ಪುನೀತ್ ಅವರನ್ನು ಕರೆದುಕೊಂಡು ನವನಗರ ಪೊಲೀಸ್ ಠಾಣೆಗೆ ಹೋಗಿ ತಿಳಿಸಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ರೆಕಾರ್ಡಿಂಗ್ ಪರಿಶೀಲಿಸಿದಾಗ ಹಣ ತೆಗೆದುಕೊಂಡು ಹೋಗಿದ್ದ ಸವಾರರ ದ್ವಿಚಕ್ರ ವಾಹನದ ನಂಬರ್ ದೊರೆಯಿತು. ದಾಖಲೆ ತೆಗೆದು ಅವರ ಮೊಬೈಲ್‌ಗೆ ಕರೆ ಮಾಡಿದಾಗ ಹಣವನ್ನು ಮರಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.