ADVERTISEMENT

‘ಸಾಲ ಮರುಪಾವತಿಯಾದರಷ್ಟೇ ಸಂಘ ಅಭಿವೃದ್ಧಿ’

​ಪ್ರಜಾವಾಣಿ ವಾರ್ತೆ
Published 9 ಮೇ 2025, 14:39 IST
Last Updated 9 ಮೇ 2025, 14:39 IST
ಕುಳಗೇರಿ ಕ್ರಾಸ್ ಗ್ರಾಮದ ಶ್ರೀಕಾಂತ ಅಕ್ಕಸಾಲಿ ಅವರ ಮಳಿಗೆಯಲ್ಲಿ ಆರಂಭವಾದ ಮೌನೇಶ್ವರ ಪತ್ತಿನ ಸಹಕಾರ ಸಂಘದ ನೂತನ ಶಾಖೆಯ ನಾಮಫಲಕನ್ನು ಬಾಗಲಕೋಟೆ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕಿನ ನಿರ್ದೆಶಕ ಪ್ರಕಾಶ ತಪಶೆಟ್ಟಿ, ಮುಚಖಂಡಯ್ಯ ಹಂಗರಗಿ, ದಾನಯ್ಯ ಹಿರೇಮಠ ಶುಕ್ರವಾರ ಅನಾವರಣಗೊಳಿಸಿದರು
ಕುಳಗೇರಿ ಕ್ರಾಸ್ ಗ್ರಾಮದ ಶ್ರೀಕಾಂತ ಅಕ್ಕಸಾಲಿ ಅವರ ಮಳಿಗೆಯಲ್ಲಿ ಆರಂಭವಾದ ಮೌನೇಶ್ವರ ಪತ್ತಿನ ಸಹಕಾರ ಸಂಘದ ನೂತನ ಶಾಖೆಯ ನಾಮಫಲಕನ್ನು ಬಾಗಲಕೋಟೆ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕಿನ ನಿರ್ದೆಶಕ ಪ್ರಕಾಶ ತಪಶೆಟ್ಟಿ, ಮುಚಖಂಡಯ್ಯ ಹಂಗರಗಿ, ದಾನಯ್ಯ ಹಿರೇಮಠ ಶುಕ್ರವಾರ ಅನಾವರಣಗೊಳಿಸಿದರು   

ಕುಳಗೇರಿ ಕ್ರಾಸ್: ಸಹಕಾರ ಸಂಘಗಳು ಅಭಿವೃದ್ಧಿಯತ್ತ ಸಾಗಲು ಗ್ರಾಹಕರು ಸಂಘದ ಜೊತೆಗೆ ಉತ್ತಮ ರೀತಿಯಲ್ಲಿ ವ್ಯವಹಾರ ಮಾಡುವುದು ಮತ್ತು ಪಡೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡುವುದು ಮುಖ್ಯ’ ಎಂದು ಬಾಗಲಕೋಟೆ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ಪ್ರಕಾಶ ತಪಶೆಟ್ಟಿ ತಿಳಿಸಿದರು.

ಗ್ರಾಮದ ಜಗದ್ಗುರು ಮೌನೇಶ್ವರ ಪತ್ತಿನ ಸಹಕಾರ ಸಂಘದ ನೂತನ ಶಾಖೆಯ ನಾಮಫಲಕವನ್ನು ಶುಕ್ರವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

ಬಾಗಲಕೋಟೆ ಸಹಕಾರ ಸಂಘಗಳ ಉಪ ನಿಬಂಧಕ ದಾನಯ್ಯ ಹಿರೇಮಠ ಮಾತನಾಡಿ, ‘ಸಹಕಾರ ಸಂಘಗಳು ನೀಡಿದ ಸಾಲವನ್ನು ಸರಿಯಾದ ರೀತಿಯಲ್ಲಿ ಮರು ಪಾವತಿ ಮಾಡದೇ ಹೋದರೆ ಆ ಸಂಘಗಳು ದಿವಾಳಿಯಾಗುತ್ತವೆ’ ಎಂದು ಎಚ್ಚರಿಸಿದರು.

ADVERTISEMENT

ಬಾಗಲಕೋಟೆ ಸಹಕಾರ ಸಂಘಗಳ ಒಕ್ಕೂಟಗಳ ಅಧ್ಯಕ್ಷ ಮುಚಖಂಡಯ್ಯ ಬಿ. ಹಂಗರಗಿ ಮಾತನಾಡಿ, ‘ಗ್ರಾಹಕರ ಹಣಕ್ಕೆ ತೊಂದರೆಯಾಗದಂತೆ ಹಾಗೂ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತ ಮಂಡಳಿಯದ್ದು’ ಎಂದು ತಿಳಿಸಿದರು.

ಅರುಣ ಶಂಕರಭಟ್ಟ ಜೋಶಿ ನೇತ್ರತ್ವದಲ್ಲಿ ಪೂಜೆ ನಡೆಯಿತು

ಬೆಳಗಾವಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿರ್ದೆಶಕ ಸುರೇಶಗೌಡ, ಮಹಾದೇವ ಕುಂಬಾರ, ಶ್ರೀ ಶೈಲ ಬೆಳವಲದ, ನಿಂಗಪ್ಪ ಬಡಿಗೇರ, ಸುರೇಶ ಬೇಲಾಳ, ಕೃಷ್ಣಪ್ಪ ಬಡಿಗೇರ, ಭೀಮಪ್ಪ ಬಡಿಗೇರ, ತುಳಸಾ ಪೂಜಾರ, ಪೂಜಾ ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.