ಜಮಖಂಡಿ: ‘ಸಂಶೋಧನೆಯಲ್ಲಿ ಕ್ರಮ ಬದ್ಧತೆ ಇರಬೇಕು ಮತ್ತು ಹೊಸ ಆಯಾಮಗಳನ್ನು ಅನ್ವಯಿಸಿ ಸಂಶೋಧನೆ ಕೈಗೊಂಡು ಇತಿಹಾಸಕ್ಕೆ ಹೊಸ ರೂಪ ನೀಡಬೇಕಾಗಿರುವುದು ಸಂಶೋಧಕನ ಜವಾಬ್ದಾರಿ. ಸ್ಥಳೀಯ ಇತಿಹಾಸಕ್ಕೆ ಹೆಚ್ಚು ಮಹತ್ವ ನೀಡಬೇಕು’ ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಚೀನ ಇತಿಹಾಸ ಮತ್ತು ವಿಭಾಗದ ಪ್ರಾಧ್ಯಾಪಕ ಎಸ್.ವೈ.ಸೋಮಶೇಖರ ಹೇಳಿದರು.
ಇಲ್ಲಿನ ಬಿಎಸ್ ಡಿಇ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಡಿ.ಪೋಳ ಅಧ್ಯಕ್ಷತೆ ವಹಿಸಿದ್ದರು. ಬಿ.ಎಂ.ನುಚ್ಚಿ, ಸೌಂದರ್ಯ ಜಕಾತಿ, ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಯೋಜಕ ಮಂಜುನಾಥ ಪಾಟೀಲ, ಅರವಿಂದ ಅಮಲಝರಿ ನಾಗೇಶ ಎಲಿಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.