ADVERTISEMENT

ಇಳಕಲ್ | ಕ್ಷುಲ್ಲಕ ಕಾರಣಕ್ಕೆ ಗಲಾಟೆ: ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 13:14 IST
Last Updated 22 ಜೂನ್ 2025, 13:14 IST
<div class="paragraphs"><p>ಹಲ್ಲೆ</p></div>

ಹಲ್ಲೆ

   

(ಪ್ರಾತಿನಿಧಿಕ ಚಿತ್ರ)

ಇಳಕಲ್: ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂ ಸಮುದಾಯ ಎರಡು ಗುಂಪುಗಳು ತಲ್ವಾರ್‌, ಕಬ್ಬಿಣದ ರಾಡ್‌ ಹಿಡಿದು ಹೊಡೆದಾಡಿದ ಘಟನೆ ನಗರದ ಹೊಸಪೇಟೆ ಗಲ್ಲಿಯಲ್ಲಿ ಈಚೆಗೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ADVERTISEMENT

ಇಬ್ಬರು ಯುವಕರ ನಡುವೆ ಬೈಕ್ ಪಾರ್ಕಿಂಗ್ ವಿಷಯಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ. ಎರಡು ಗುಂಪುಗಳು ಬೀದಿಯಲ್ಲಿ ಮಾರಾಕಾಸ್ತ್ರಗಳೊಂದಿಗ ಬಡಿದಾಡಿಕೊಂಡಿವೆ.
ಗಾಯಗೊಂಡ ಎರಡು ಗುಂಪುಗಳ ನಾಲ್ವರು ಯುವಕರು, ಇಳಕಲ್ ಹಾಗೂ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.