ರಾಂಪುರ: ‘ಯುವ ಸಮೂಹ ಸಮಾಜ ಸೇವೆಯಲ್ಲಿ ಆಸಕ್ತಿ ವಹಿಸಿದರೆ ಮಹಾತ್ಮ ಗಾಂಧೀಜಿಯವರ ಗ್ರಾಮ ರಾಜ್ಯದ ಕನಸು ನನಸಾಗುತ್ತದೆ’ ಎಂದು ವಕೀಲ ಜಿ.ಜಿ.ಮಾಗನೂರ ಹೇಳಿದರು.
ಸಮೀಪದ ಚಿಟಗಿನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಆರಂಭವಾದ ಬೇವೂರಿನ ಪಿ.ಎಸ್.ಸಜ್ಜನ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಎನ್.ಎಸ್.ಎಸ್. ಶಿಬಿರಾರ್ಥಿಗಳು ಸಮಾಜ ಸೇವೆಯ ಮಹತ್ವ ತಿಳಿದು ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ವಹಿಸಬೇಕು’ ಎಂದರು.
ಅತಿಥಿ, ಪುಂಡಪ್ಪ ಕಡೂರ ಮಾತನಾಡಿ, ‘ಪ್ರತಿಯೊಬ್ಬ ವಿದ್ಯಾರ್ಥಿ ಕಲಿಕೆಯ ಜೊತೆ ಸಮಾಜ ಸೇವಾ ಗುಣಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.
ಎನ್.ಬಿ.ಪಾಟೀಲ ಮಾತನಾಡಿದರು. ಪ್ರಾಸ್ತಾವಿಕವಾಗಿ ಪ್ರಾಚಾಯ೯ ಜಗದೀಶ ಭೈರಮಟ್ಟಿ ಮಾತನಾಡಿದರು. ರಾಂಪುರ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಉಮೇಶ ಮೇಟಿ ಶಿಬಿರ ಉದ್ಘಾಟಿಸಿದರು. ವೈ.ಎಚ್.ಬೆನಕನವಾರಿ, ಶ್ರೀಕರದೇಸಾಯಿ, ಯೋಜನಾಧಿಕಾರಿ ಜಿ.ಎಸ್.ಗೌಡರ, ಪ್ರಭಾರ ಮುಖ್ಯ ಶಿಕ್ಷಕ ಸುನೀಲ ಪಾಟೀಲ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.