ADVERTISEMENT

ಜಮಖಂಡಿ: ಮತ್ತೆ ಮೂವರಿಗೆ ಸೋಂಕು ದೃಢ

ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿತರ ಸಂಖ್ಯೆ 29ಕ್ಕೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 16:15 IST
Last Updated 28 ಏಪ್ರಿಲ್ 2020, 16:15 IST

ಬಾಗಲಕೋಟೆ: 11 ವರ್ಷದ ಬಾಲಕ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಮೂವರಿಗೆ ಕೋವಿಡ್–19 ಸೊಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ 29ಕ್ಕೆ ಏರಿಕೆಯಾಗಿದೆ.

ಜಮಖಂಡಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ವ್ಯಕ್ತಿಗೆ (ರೋಗಿ ಸಂಖ್ಯೆ 381) ಈಗಾಗಲೇ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಅವರ 22 ವರ್ಷದ ಮಗ ಹಾಗೂ ಸಹೋದರನ 20 ವರ್ಷದ ಪುತ್ರಿಗೆ ಈಗ ಸೋಂಕು ದೃಢಪಟ್ಟಿದೆ.ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಮುಧೋಳದ ಕೋವಿಡ್–19 ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ ಒಂದೇ ವಾಹನದಲ್ಲಿ ವಿಜಯಪುರಕ್ಕೆ ಹೋಗಿ ಬಂದಿದ್ದರು ಎಂದು ತಿಳಿದುಬಂದಿದೆ.

ಜಮಖಂಡಿಯಲ್ಲಿ ರೋಗಿ ಸಂಖ್ಯೆ 381 ವಾಸವಿದ್ದ ಮನೆಯ ಪಕ್ಕದ ಮನೆಯ 11 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಮೂವರನ್ನು ಬಾಗಲಕೋಟೆಯ ಕೋವಿಡ್–19 ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ADVERTISEMENT

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್–19 ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಬಾಗಲಕೋಟೆಯ 13, ಜಮಖಂಡಿಯ 9 ಹಾಗೂ ಮುಧೋಳದ 7 ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಇವರಲ್ಲಿ ಆರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಾಗಲಕೋಟೆ ನಗರದ 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.