ADVERTISEMENT

ತೇರದಾಳ: ವೀರಭದ್ರೇಶ್ವರ ದೇವಸ್ಥಾನಕ್ಕೆ ಕಳಸಾರೋಹಣ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 14:13 IST
Last Updated 9 ಜೂನ್ 2025, 14:13 IST
ತೇರದಾಳದ ಆರಾಧ್ಯ ದೈವ ವೀರಭದ್ರೇಶ್ವರ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ನೆರವೇರಿಸಲಾಯಿತು 
ತೇರದಾಳದ ಆರಾಧ್ಯ ದೈವ ವೀರಭದ್ರೇಶ್ವರ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ನೆರವೇರಿಸಲಾಯಿತು    

ತೇರದಾಳ: ಪಟ್ಟಣದ ಆರಾಧ್ಯ ದೈವ ವೀರಭದ್ರೇಶ್ವರ ದೇವಸ್ಥಾನಕ್ಕೆ ಈಚೆಗೆ ಕಳಸಾರೋಹಣ ನಡೆಯಿತು.

ತಾಲ್ಲೂಕಿನ ಹನಗಂಡಿಯ ಕಲಾಕಾರರಿಂದ ತಯಾರಾದ ಕಳಸವನ್ನು ಕ್ಷೇತ್ರಾಧಿಪತಿ ಅಲ್ಲಮಪ್ರಭು ದೇವಸ್ಥಾನದಲ್ಲಿ ತಂದಿಟ್ಟು, ಅಲ್ಲಿಂದ ಮಹಿಳೆಯರು ಆರತಿ, ಕುಂಭ ಹಾಗೂ ಕಲಾವಿದರ ವಾದ್ಯ ಮೇಳಗಳ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು. ನಂತರ ದೇವಸ್ಥಾನದಲ್ಲಿ ಕಳಸಕ್ಕೆ ವಿವಿಧ ಪೂಜಾ ವಿಧಿ, ವಿಧಾನಗಳನ್ನು ಪೂರೈಸಲಾಯಿತು.‌

ಕಳಸಾರೋಹಣದ ಅಂಗವಾಗಿ ದೇವಸ್ಥಾನ ಹಾಗೂ ವೀರಭದ್ರೇಶ್ವರ ಮೂರ್ತಿಗೆ  ವಿಶೇಷ ಅಲಂಕಾರ ಮಾಡಲಾಗಿತ್ತು. ಅಭಿಷೇಕ ಹಾಗೂ ಪೂಜೆ ಮಾಡಲಾಯಿತು. ಪಟ್ಟಣದ ಹಿರೇಮಠದ ಗಂಗಾಧರ ದೇವರ ಸಾನ್ನಿಧ್ಯದಲ್ಲಿ ಕಳಸಾರೋಹಣ ನೆರವೇರಿಸಲಾಯಿತು.

ADVERTISEMENT

ನೂರಾರು ಭಕ್ತರು ಪಾಲ್ಗೊಂಡಿದ್ದರು. ಬಳಿಕ ದೇವಸ್ಥಾನದಲ್ಲಿ ವಿಶೇಷ ಕಾರ್ತಿಕೋತ್ಸವ ನೆರವೇರಿತು. ನಂತರ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.