ಬಾದಾಮಿ: ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯ ಸುಬ್ಬಮ್ಮಳ ಪಾತ್ರದಲ್ಲಿ ರಂಗಭೂಮಿ ಕಲಾವಿದೆ ರಾಧಾರಾಣಿ ಪ್ರದರ್ಶಿಸಿದ ಏಕಪಾತ್ರಾಭಿನಯ ಮತ್ತು ಸಂಭಾಷಣೆ ಪ್ರೇಕ್ಷಕರ ಮನ ಗೆದ್ದಿತು.
ಇಲ್ಲಿನ ಶಿವಯೋಗಮಂದಿರ ಶಾಖಾ ಮಠದ ಆವರಣದಲ್ಲಿ ವಿಶ್ವಚೇತನ ಸಂಘದ ಆಶ್ರಯದಲ್ಲಿ ಶನಿವಾರ ರಾಷ್ಟ್ರಕವಿ ಕುವೆಂಪು ರಚಿತ ‘ ಕಾನೂರು ಸುಬ್ಬಮ್ಮ ಹೆಗ್ಗಡತಿ ’ ಕಾದಂಬರಿ ರೂಪವನ್ನು ನಾಟಕದಲ್ಲಿ ಶಿರಸಿ ನಾಟ್ಯರಂಗ ಪ್ರದರ್ಶನ ಕಲಾಕೇಂದ್ರ ಮತ್ತು ಭರತನಾಟ್ಯ, ನಿನಾಸಂ ಕಲಾವಿದೆ ಪ್ರದರ್ಶಿಸಿದರು.
ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಮತ್ತು ನಗೆ ನಾಟಕ ವೀಕ್ಷಿಸಿದ ಪ್ರೇಕ್ಷಕರು 50 ನಿಮಿಷದ ಕುವೆಂಪು ಅವರ ನಾಟಕವನ್ನು ಗಂಭೀರತೆಯಿಂದ ಮಂತ್ರಮುಗ್ಧರಾಗಿ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.