ಚೊಳಚಗುಡ್ಡ (ಬಾದಾಮಿ): ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಹುತಾತ್ಮ ವೀರಯೋಧ ಶಿವಬಸಯ್ಯ ಕುಲಕರ್ಣಿ ಅವರ ಸ್ಮಾರಕಕ್ಕೆ ಗೌರವವನ್ನು ಸಲ್ಲಿಸಿ ಸಂಭ್ರಮದಿಂದ ವಿಜಯೋತ್ಸವವನ್ನು ಆಚರಿಸಲಾಯಿತು.
ಜಿಲ್ಲಾ ಘಟಕದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅರ್ಜುನ ಕೋರೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಂದನೆ ಸ್ವೀಕರಿಸಿದರು. ಕಾರ್ಗಿಲ್ ವೀರಯೋಧನ ಸ್ಮಾರಕಕ್ಕೆ ಬೆಳಿಗ್ಗೆ ಅಭಿಷೇಕ ಕೈಗೊಳ್ಳಲಾಯಿತು. ವೀರಗಲ್ಲಿಗೆ ಮತ್ತು ಸ್ಮಾರಕಕ್ಕೆ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ವೀರಯೋಧನ ತಾಯಿ ಬಸಮ್ಮ, ಪತ್ನಿ ನಿರ್ಮಲಾ, ಪುತ್ರ ವಿಶಾಲ್, ಕುಟುಂಬದ ಸದಸ್ಯರು, ಗುರುಪಾದಪ್ಪ ವಾಲಿ, ಗಂಗನಗೌಡ ಪಾಟೀಲ, ಕುಬೇರಗೌಡ ಪಾಟೀಲ, ವೀರಣ್ಣ ಸಾತನ್ನವರ, ಶರಣಗೌಡ ಪಾಟೀಲ, ವೀರನಗೌಡ ಪಾಟೀಲ ಮಾಜಿ ಸೈನಿಕರು, ಹೋಮ್ ಗಾರ್ಡ್ಸ್, ಎನ್.ಸಿ.ಸಿ, ಎನ್ಎಸ್ಎಸ್ ವಿದ್ಯಾರ್ಥಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸ್ವಾತಂತ್ರ್ಯಯೋಧರ ವೀರಯೋಧರ ಸ್ಮರಣೆ: ‘ ಗ್ರಾಮದಲ್ಲಿ ಸ್ವಾತಂತ್ರ್ಯದ ಸಲುವಾಗಿ ಹೋರಾಟ ಕೈಗೊಂಡ ಮಹನೀಯರು ಮತ್ತು ಭಾರತೀಯ ಸೇನಾ ಪಡೆಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರ ಸೇವೆ ಶ್ಲಾಘನೀಯ’ ಎಂದು ಬಸವಲಿಂಗ ಸ್ವಾಮೀಜಿ ಹೇಳಿದರು.
ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ವೀರಯೋಧರ ಪತ್ನಿಯರು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ನೂತನ ಆಧಾರ್ ಕಾರ್ಡ್ ಮಾಡಿ ಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.