ADVERTISEMENT

ಮಲ್ಲಾಪುರ: ಡೆಂಗಿ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 16:25 IST
Last Updated 28 ಏಪ್ರಿಲ್ 2025, 16:25 IST
ಬಾಗಲಕೋಟೆ ತಾಲ್ಲೂಕಿನ ಮಲ್ಲಾಪುರದಲ್ಲಿ ನಡೆದ ಎನ್‌ಎಸ್‌ಎಸ್‌ ಶಿಬಿರದಲ್ಲಿ ಡೆಂಗಿ ಕುರಿತು ಜಾಗೃತಿ ಮೂಡಿಸಲಾಯಿತು
ಬಾಗಲಕೋಟೆ ತಾಲ್ಲೂಕಿನ ಮಲ್ಲಾಪುರದಲ್ಲಿ ನಡೆದ ಎನ್‌ಎಸ್‌ಎಸ್‌ ಶಿಬಿರದಲ್ಲಿ ಡೆಂಗಿ ಕುರಿತು ಜಾಗೃತಿ ಮೂಡಿಸಲಾಯಿತು   

ಬಾಗಲಕೋಟೆ: ನಗರದ ಬಸವೇಶ್ವರ ವಾಣಿಜ್ಯ ಕಾಲೇಜು ವತಿಯಿಂದ ಮಲ್ಲಾಪುರದಲ್ಲಿ ಹಮ್ಮಿಕೊಂಡಿರುವ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು ಇತ್ತಿಚೆಗೆ ಗ್ರಾಮಸ್ಥರಿಗೆ ಡೆಂಗಿ ಜಾಗೃತಿ ಮೂಡಿಸಿದರು.

ಆರೋಗ್ಯ ಇಲಾಖೆ ಸಹಯೋಗದೊಂದಿಗೆ ‘ಡೇಂಜರ್ ಡೇಂಜರ್, ಡೆಂಗಿ ಡೇಂಜರ್’, ‘ನಿಂತ ನೀರು ಸೊಳ್ಳೆಗಳ ತವರು’ ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗುತ್ತಾ ಗ್ರಾಮದೆಲ್ಲೆಡೆ ಸಂಚರಿಸಿದರು. ನಂತರ ಬೀದಿ ನಾಟಕ ಪ್ರದರ್ಶಿಸಲಾಯಿತು. ರಕ್ತದಾನ ಹಾಗೂ ಮತದಾನ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು.

ಪ್ರಾಚಾರ್ಯ ಜಗನ್ನಾಥ್ ಚೌವ್ಹಾಣ, ಎನ್.ಎಸ್.ಎಸ್ ಅಧಿಕಾರಿ ಎಂ.ಎಂ. ಹುದ್ದಾರ, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಕೆ.ಎಫ್. ಮಾಯಾಚಾರಿ, ಶಿಬಿರದ ಸಂಘಟಕರಾದ ರವಿ ಬಳಗೇರಿ, ಸಂಘಟಕಿ ಶ್ರುತಿ ಬಡಿಗೇರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.