ಜಮಖಂಡಿ(ಬಾಗಲಕೋಟೆ ಜಿಲ್ಲೆ): ರಾಜ್ಯದ ವಿವಿಧ ಕಡೆಗಳಲ್ಲಿ ನಡೆದ ತೆರಬಂಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆದ್ದಿದ್ದ ತಾಲ್ಲೂಕಿನ ಬುದ್ನಿ ಗ್ರಾಮದ ರೈತ ಮಹಾದೇವ ಕೊಲೂರ ಅವರು ಸಾಕಿದ ಎತ್ತು ₹5.11 ಲಕ್ಷಕ್ಕೆ ಭಾನುವಾರ ಮಾರಾಟವಾಗಿದೆ.
‘ಮಹಾರಾಷ್ಟ್ರದ ಪುಣೆಯ ದೇವಸ್ಥಾನದವರು ದೇವಸ್ಥಾನದ ರಥ ಎಳೆಯಲು ಈ ಎತ್ತನ್ನು ಖರೀದಿಸಿದ್ದಾರೆ’ ಎಂದು ರೈತ ತಿಳಿಸಿದ್ದಾರೆ. ಮಾರಾಟವಾದ ಎತ್ತನ್ನು ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಿ, ಆರತಿ ಮಾಡಿ ಬೀಳ್ಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.