ADVERTISEMENT

ರಬಕವಿ ಬನಹಟ್ಟಿ | ‘ರಾಜ್ಯದ ನೇಕಾರರ ಅಭಿವೃದ್ಧಿಗಾಗಿ ಶ್ರಮಿಸುವೆ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 14:18 IST
Last Updated 28 ಜೂನ್ 2025, 14:18 IST
ಬನಹಟ್ಟಿಯ ಹಟಗಾರ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ ಮಂಡಳಿಯ ಅಧ್ಯಕ್ಷ ಕೀರ್ತಿ ಗಣೇಶರನ್ನು ಸಂಘದ ಅಧ್ಯಕ್ಷ ಸುರೇಶ ಕೋಲಾರ ಸನ್ಮಾನಿಸಿದರು.
ಬನಹಟ್ಟಿಯ ಹಟಗಾರ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ ಮಂಡಳಿಯ ಅಧ್ಯಕ್ಷ ಕೀರ್ತಿ ಗಣೇಶರನ್ನು ಸಂಘದ ಅಧ್ಯಕ್ಷ ಸುರೇಶ ಕೋಲಾರ ಸನ್ಮಾನಿಸಿದರು.   

ರಬಕವಿ ಬನಹಟ್ಟಿ: ಮುಂದಿನ ದಿನಗಳಲ್ಲಿ ರಾಜ್ಯದ ನೇಕಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಂಡು ಅವರ ಅಭಿವೃದ್ದಿಗಾಗಿ ಶ್ರಮಿಸುವೆ ಎಂದು ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ ತಿಳಿಸಿದರು.

ಈಚೇಗೆ ಇಲ್ಲಿನ ಹಟಗಾರ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಹಿಂದುಳಿದ ವರ್ಗಗಳ ಯೋಜನೆಗಳನ್ನು ಜನರಿಗೆ ಹಾಗೂ ನೇಕಾರರಿಗೆ ತಲುಪಿಸುವ ನಿಟ್ಟಿನಲ್ಲಿ ಗಮನ ನೀಡಲಾಗುವುದು. ನೇಕಾರರು ಕೂಡಾ ಸರ್ಕಾರದ ಸೌಲಭ್ಯಗಳ ಮಾಹಿತಿಯನ್ನು ಪಡೆದುಕೊಂಡು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು. ನೇಕಾರ ಸಮುದಾಯ ಹೆಚ್ಚಾಗಿರುವ ಗದಗ, ಬಾಗಲಕೋಟೆ, ವಿಜಯಪುರ ಮತ್ತು ದೊಡ್ಡಬಳ್ಳಾಪುರ, ಜಿಲ್ಲೆಗಳಿಗೆ ವಿಶೇಷ ಆದ್ಯತೆಯನ್ನು ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

ADVERTISEMENT

ಸಂಘದ ಅಧ್ಯಕ್ಷ ಸುರೇಶ ಕೋಲಾರ, ಉಪಾಧ್ಯಕ್ಷ ದಾನಪ್ಪ ಹುಲಜತ್ತಿ, ವೀರೂಪಾಕ್ಷಪ್ಪ ಕೊಕಟನೂರ, ಚನವೀರಪ್ಪ ಹಾದಿಮನಿ, ದೇವೇಂದ್ರ ಶೀಲವಂತ, ಈರಪ್ಪ ಹೊನವಾಡ, ಅಶೋಕ ಮಾಲಾಪುರ, ಚಂದ್ರಶೇಖರ ಬಡ್ಡೂರ, ರಾಜು ಜಾಲಿಗಿಡದ, ಶೇಖರ ಹಕ್ಕಲದಡ್ಡಿ, ಬಸವರಾಜ ಕೊಕಟನೂರ, ರವಿ ಬಾಡಗಿ, ಮಧುಕೇಶ್ವರ ಬೆಳಗಲಿ, ಹೇಮಲತಾ ಪಟ್ಟಣ, ಶೋಭಾ ಚನಪನ್ನವರ, ಸಂಜಯ ಜವಳಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.