ಮಹಾಲಿಂಗಪುರ: ‘ಕಠಿಣ ಪರಿಶ್ರಮದ ಮೂಲಕ ಮುನ್ನುಗ್ಗಿದರೆ ಎಂಥಹ ಸಾಧನೆಯನ್ನಾದರೂ ಮಾಡಬಹುದು’ ಎಂದು ಹುಬ್ಬಳ್ಳಿಯ ವೀರಭಿಕ್ಷಾವರ್ತಿ ನೀಲಕಂಠಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕುರುಹಿನಶೆಟ್ಟಿ ಯುವ ವೇದಿಕೆ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ನೇಕಾರ ಮಕ್ಕಳ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವಾನಂದ ಶಾಲೆ ಮುಖ್ಯಶಿಕ್ಷಕ ಎಸ್.ಕೆ.ಗಿಂಡೆ ಮಾತನಾಡಿ, ‘ಕಣ್ಣಿಗೆ ಕಾಣುವ ನಿಜವಾದ ದೇವರು ತಂದೆ ತಾಯಿಗಳು. ಅವರಿಗೆ ಯಾವ ಮಕ್ಕಳು ನೋವು ಮಾಡಬಾರದು’ ಎಂದರು.
ಯುವ ವೇದಿಕೆ ಅಧ್ಯಕ್ಷ ರವಿ ಮುಂಡಗನೂರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ.ಎಸ್.ಮುಗಳಖೋಡ, ಹೊಳೆಪ್ಪ ಬಾಡಗಿ, ಈರಪ್ಪ ಬೆಟಗೇರಿ, ಮಹೇಶ ಜಿಡ್ಡಿಮನಿ, ಅಡಿವೆಪ್ಪ ಹುಣಶ್ಯಾಳ, ಚನ್ನಪ್ಪ ಹುಣಶ್ಯಾಳ, ಪ್ರಕಾಶ ಬಿಲಕುಂದಿ, ಮುತ್ತಪ್ಪ ಢವಳೇಶ್ವರ, ಶ್ರೀಶೈಲ ಬೀಸನಕೊಪ್ಪ, ಶಂಕರ ಯಾದವಾಡ, ಮಹಾಲಿಂಗ ಕೆಳಗಿನಮನಿ, ರಾಜೇಂದ್ರ ಮಿರ್ಜಿ, ಶ್ರೀಶೈಲ ಬಾಳಿಗಿಡದ, ಚನಬಸು ಹುಣಶ್ಯಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.