ಬಾದಾಮಿ: ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ರಸ್ತೆಯ ಅಂಚೆ ಇಲಾಖೆಯಿಂದ ಬಸ್ ನಿಲ್ದಾಣದ ವರೆಗೆ ಡಿವೈಡರ್ ಪಕ್ಕದ ಮರಳನ್ನು ಪುರಸಭೆ ಕಾರ್ಮಿಕರು ಸೋಮವಾರ ಸ್ವಚ್ಛತೆ ಕೈಗೊಂಡರು.
ಈಚೆಗೆ ‘ಪ್ರಜಾವಾಣಿ’ ಕುಂದುಕೊರತೆ ವಿಭಾಗದಲ್ಲಿ ರಸ್ತೆಯಲ್ಲಿ ತುಂಬಿದ ಮರಳು ಕುರಿತು ಪ್ರಕಟಿಸಿದ್ದನ್ನು ಸ್ಮರಿಸಬಹುದು.
ವರದಿಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು ಕಾರ್ಮಿಕರಿಂದ ಸ್ವಚ್ಛಗೊಳಿಸಿದರು. ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತದ ವರೆಗೆ ರಸ್ತೆಯಲ್ಲಿರುವ ಮರಳನ್ನು ಸ್ವಚ್ಛತೆ ಮಾಡಬೇಕು ಎಂದು ನಾಗರಿಕರು ಪುರಸಭೆಗೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.