ಬಳ್ಳಾರಿ: ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನ ಮಂತ್ರಿ ಡಾ.ಬಾಬು ಜಗಜೀವನರಾಂ ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಬೇಕು ಎಂದು ಪ್ರವಾಸೋದ್ಯಮ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ ಸಲಹೆ ನೀಡಿದರು.
ಜಿಲ್ಲಾ ಆಡಳಿತ ಭವನ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಯ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 120ನೇ ಜನ್ಮ ದಿನಾಚರಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನ ಮಂತ್ರಿ ಡಾ. ಬಾಬು ಜಗಜೀವನರಾಂ ಅವರ 104ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರದಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ವೃತ್ತ ಹಾಗೂ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಚಿವರು, ಸ್ತಬ್ಧಚಿತ್ರಗಳ ಬೃಹತ್ ಮೆರವಣಿಗೆ ಮಾಜಿ ಪುರಸಭೆ ಕಾಲೇಜು ಮೈದಾನದಲ್ಲಿ ಚಾಲನೆ ನೀಡಿದರು. ಮಹಾತ್ಮರು ಎಂದೆಂದಿಗೂ ಪ್ರಸ್ತುತ. ಜಾತಿ, ಧರ್ಮ, ವರ್ಗಗಳ ಭೇದವಿಲ್ಲದ ಸಾಮಾಜಿಕ ಸಮಾನತೆ ಹೊಂದಿದ ಸಮಾಜ ನಿರ್ಮಾಣ ಇವರ ಧ್ಯೇಯ. ಅಂಬೇಡ್ಕರ್, ಜಗಜೀವನರಾಮ್ ಅವರ ಕೊಡುಗೆ ಅಪಾರವಾಗಿದೆ. ಅವರ ಧ್ಯೇಯವನ್ನು ನಾವು ಸಾಧಿಸುವ ಮೂಲಕ ಜ್ಯಾತ್ಯತೀತ ಸಮಾಜ ನಿರ್ಮಿಣ ಮಾಡಬೇಕು. ಉತ್ತಮ ನಾಗರಿಕರಾಗಿ ಎಂದೆಂದೂ ಮಾದರಿಯಾಗಿರಬೇಕು. ಇವರಿಬ್ಬರ ಜನ್ಮ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಹೇಳಿದರು.
ಮೆರವಣಿಗೆಯು ಮಾಜಿ ಪುರಸಭೆ ಕಾಲೇಜು ಮೈದಾನದಿಂದ ಹೊರಟು, ಹಳೆಯ ಬೆಂಗಳೂರು ರಸ್ತೆ, ಮೋತಿ ಸರ್ಕಲ್ ಮಾರ್ಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಸ್ಥಬ್ದ ಚಿತ್ರಗಳು, ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದವು.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ, ಟಿ. ಹೆಚ್. ಸುರೇಶ್ ಬಾಬು, ಸಂಸದೆ ಜೆ. ಶಾಂತಾ, ಎಂಎಲ್‌ಸಿ ಮೃತ್ಯುಂಜಯ ಜಿನಗಾ, ಮೇಯರ್ ಪಾರ್ವತಿ ಇಂದೂ ಶೇಖರ್, ಉಪಮೇಯರ್ ಶಶಿಕಲಾ, ಬುಡ ಅಧ್ಯಕ್ಷ ಗುರುಲಿಂಗನಗೌಡ ತಾ.ಪಂ. ಅಧ್ಯಕ್ಷೆ ಉಮಾದೇವಿ, ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್, ಎಸ್‌ಪಿ ಡಾ. ಚಂದ್ರಗುಪ್ತ, ಸಿಇಓ ಮುತ್ತಯ್ಯ, ಅಪರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಶೋಕ ಕುರೇರ, ಸಮಾಜ ಕಲ್ಯಾಣಾಧಿಕಾರಿ ರಾಜಪ್ಪ, ಪಾಲಿಕೆ ಆಯುಕ್ತ ಡಿ.ಎಲ್. ನಾರಾಯಣ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ನಲಣ್ಲ್ಣ, ಗಿರಿಮಲಪ್ಲ್ಪ, ಎಲ್. ಮಾರಣ್ಣ, ರಾಮಪ್ಪ, ಬಿ.ಕೆ. ಬಸಪ್ಪ, ಛಲಪತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.