ADVERTISEMENT

`ಕಂಪ್ಲಿ: ಗೃಹರಕ್ಷಕ ದಳ ಕಚೇರಿ ಮೇಲ್ದರ್ಜೆಗೆ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 5:31 IST
Last Updated 3 ಏಪ್ರಿಲ್ 2013, 5:31 IST

ಕಂಪ್ಲಿ: ಸ್ಥಳೀಯ ಗೃಹರಕ್ಷಕ ದಳ ಕಚೇರಿಯನ್ನು ಶೀಘ್ರ ಮೇಲ್ದರ್ಜೆಗೇ ಏರಿಸಲಾಗುವುದು ಎಂದು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಅಧಿಕಾರಿ ಎಂ.ಎ. ಶಾಕೀಬ್ ತಿಳಿಸಿದರು.

ಸ್ಥಳೀಯ ಗೃಹರಕ್ಷಕ ದಳ ಉಪ ಘಟಕ ಕಚೇರಿಯಲ್ಲಿ ಜಿಲ್ಲಾ ರಕ್ಷಕ ದಳ ಆಯೋಜಿಸಿದ್ದ ಗೃಹ ರಕ್ಷಕ ದಳ ಜಾಗೃತಿ ಮತ್ತು ಪಥ ಸಂಚಲನ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿ, ಜಿಲ್ಲೆಯಲ್ಲಿ ಮೊದಪ ಬಾರಿಗೆ ಮಹಿಳಾ ಗೃಹರಕ್ಷಕ ದಳ ಘಟಕ ಆರಂಭಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ಗುಡೆಕೋಟೆ, ಮೋಕ, ತೆಕ್ಕಲಕೋಟೆ, ಕುಡುತಿನಿ, ಟಿ.ಬಿ.ಡ್ಯಾಂ ಮತ್ತು ಮರಿಯಮ್ಮನಹಳ್ಳಿಗಳಲ್ಲಿ ಗೃಹರಕ್ಷಕ ಘಟಕಗನ್ನು ಆರಂಭಿಸಲಾಗುವುದು ಎಂದರು.

ಪಿಎಸ್‌ಐ ಎನ್. ಆನಂದ್, ಉಪ ತಹಶೀಲ್ದಾರ ಕೆ. ಬಾಲಪ್ಪ, ಗಣ್ಯ ವರ್ತಕ ಜಿ. ರಾಜರಾವು, ಸ್ಥಳೀಯ ಗೃಹರಕ್ಷಕ ದಳದ ಘಟಕಾಧಿಕಾರಿ ಎಚ್. ಅಬ್ದುಲ್ ಸುಬಾನ್, ಸಹಾಯಕ ಭೋದಕ ಎಚ್. ತಿಪ್ಪೆಸ್ವಾಮಿ, ನಿಕಟಪೂರ್ವ ಘಟಕಾಧಿಕಾರಿ ರಾಮಕೃಷ್ಣ ಮಾತನಾಡಿದರು.

ಬಳ್ಳಾರಿ ಘಟಕಾಧಿಕಾರಿ ಜಿ. ಬಸವರಾಜ, ಹೊಸಪೇಟೆ ಘಟಕಾಧಿಕಾರಿ ಎಸ್.ಎಂ. ಗಿರೀಶ್, ಬಳ್ಳಾರಿ ಪ್ಲಟೂನ್ ಕಮಾಂಡರ್ ಜೆ. ಸುರೇಶ್, ಬಿ.ಕೆ. ಬಸವಲಿಂಗಪ್ಪ, ಬಳ್ಳಾರಿ ಸಾರ್ಜೆಂಟ್ ಎಚ್. ಲಕ್ಷ್ಮಿನಾರಾಯಣ, ಹಗರಿ ಬೊಮ್ಮನಹಳ್ಳಿ ಘಟಕಾಧಿಕಾರಿ ಪಿ. ಶಂಕರ್ ನಾಯಕ್, ಕಮಲಾಪುರ ಘಟಕಾಧಿಕಾರಿ ಉದಯಚಂದ್ರ, ಸಿರಗುಪ್ಪ ಘಟಕಾಧಿಕಾರಿ ಶೇಖಪ್ಪ ಇತರರು ಹಾಜರಿದ್ದರು.

ಜಿ. ವೀರೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗೃಹರಕ್ಷಕ ದಳ ಆಕರ್ಷಕ ಪಥಸಂಚಲನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.