ಸಂಡೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಭಾಷಾ ಅಲ್ಪಸಂಖ್ಯಾತ ಆಯೋಗಗಳು ಗಂಜಿ ಕೇಂದ್ರಗಳಾಗಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ.ಕುಂ.ವೀರಭದ್ರಪ್ಪ ಅಭಿ ಪ್ರಾಯಪಟ್ಟರು.ಬುಧವಾರ ಸ್ದ್ದುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಗಡಿಭಾಗಗಲ್ಲಿ ಓದುತ್ತಿರುವ 50 ಸಾವಿರ ವಿದ್ಯಾರ್ಥಿಗಳಿಗೆ ಸರ್ಕಾರ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಿಲ್ಲ ಎಂದು ಗಂಭೀರವಾಗಿ ಆರೋಪಿ ಸಿದರು.
ಕನ್ನಡ ಕಟ್ಟುವ ಕೆಲಸಕ್ಕೆ ಸರ್ಕಾರ ದವರು ಅತೃಪ್ತರಾದವರಿಗೆ ಹುದ್ದೆ ನೀಡಿ ತಮ್ಮ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.ಸ್ವಾತಂತ್ರ್ಯ ಬಂದು 65 ವರ್ಷ ಗಳಾದರೂ ಹಳ್ಳಿಯ ಜನರಿಗೆ ಕುಡಿವ ನೀರು ಸಿಗದೇ ಪಡಿಪಾಟಲು ಪಡು ತ್ತಿದ್ದಾರೆ. ಸರ್ಕಾರಕ್ಕೆ ಗಡಿನಾಡ ಕನ್ನ ಡಿಗರೂ ರೈತರ ಸಂಕಷ್ಟಗಳು ಅರಿವಿಗೆ ಬರುತ್ತಿಲ್ಲ ಸಾಹಿತಿಗಳು ಪೊರಕೆ, ಕ್ರಿಮಿ ನಾಶಕಗಳ ಪಾತ್ರ ವಹಿಸ ಬೇಕಾಗಿದೆ.
ಎಲ್ಲ ಶ್ರಮಿಕ ವರ್ಗಗಳ ಒಕ್ಕೂಟವೇ ವೀರಶೈವ ಧರ್ಮವಾಗಿದ್ದು ಕಾರಣ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ನಗರೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವುದಾಗಿ ಸಮರ್ಥಿಸಿ ಕೊಂಡರು.ಈ ಸಂದರ್ಭದಲ್ಲಿ ಅಭ್ಯರ್ಥಿ ಲೇಪಾಕ್ಷ ಜವಳಿ ವಕೀಲ ಪಂಡಿ ತಾರಾಧ್ಯ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.