ADVERTISEMENT

ನಗರಗಳಲ್ಲೂ ತಂಪೆರೆದ ಜಿಟಿಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 6:05 IST
Last Updated 17 ಮಾರ್ಚ್ 2018, 6:05 IST

ಹೊಸಪೇಟೆ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಶುಕ್ರವಾರ ರಾತ್ರಿ ಜಿಟಿಜಿಟಿ ಮಳೆಯಾಗಿದೆ. ಸಂಜೆ ಏಳರ ಸುಮಾರಿಗೆ ಆರಂಭಗೊಂಡಿದ್ದ ಮಳೆ ರಾತ್ರಿ 8.30ರ ವರೆಗೆ ಸುರಿಯಿತು. ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆ ಮಳೆ ಪ್ರಾರಂಭವಾಯಿತು. ಜೋರಾಗಿ ಗಾಳಿ ಬೀಸುತ್ತಿತ್ತು.

ಗುರುವಾರ ಸಂಜೆ ಕೂಡ ತುಂತುರು ಮಳೆಆಗಿತ್ತು. ಸತತ ಎರಡು ದಿನ ಮಳೆಯಾಗಿದ್ದರಿಂದ ವಾತಾವರಣ ಸಂಪೂರ್ಣ ತಂಪಾಗಿತ್ತು.

ಕೆಲವರು ಮಳೆಯಲ್ಲಿಯೇ ನೆನೆದುಕೊಂಡು ಹೋದರೆ, ಮತ್ತೆ ಕೆಲವರು ಕೊಡೆಗಳನ್ನು ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂತು.

ADVERTISEMENT

ತಾಲ್ಲೂಕಿನ ಬಸವನದುರ್ಗ, ನಾಗೇನಹಳ್ಳಿ, ಹೊಸೂರು, ಮಲಪನಗುಡಿ, ಹೊಸಮಲಪನಗುಡಿ, ಹಂಪಿ, ಕಾರಿಗನೂರು ಸೇರಿದಂತೆ ಇತರ ಕಡೆ ಗಳಲ್ಲಿಯೂ ಮಳೆಯಾಗಿದೆ. ಆದರೆ, ಯಾವುದೇ ಜೀವ ಅಥವಾ ಆಸ್ತಿ ಹಾನಿ ಆಗಿರುವುದು ವರದಿಯಾಗಿಲ್ಲ.

ಬಳ್ಳಾರಿ ನಗರದಲ್ಲೂ ಮಳೆ
ಬಳ್ಳಾರಿ:
ನಗರದಲ್ಲಿ ಶುಕ್ರವಾರ ರಾತ್ರಿ ತುಂತುರು ಮಳೆ ಸುರಿಯಿತು. ರಾತ್ರಿ 8.30ರಿಂದ ಕೆಲ ನಿಮಿಷಗಳ ಕಾಲ ಜೋರು ಗಾಳಿಯ ಜೊತೆಗೆ ಮಳೆ ಹನಿಯಿತು. ಬೆಳಿಗ್ಗೆಯಿಂದ ಪ್ರಖರ ಬಿಸಿಲಿನ ಜೊತೆಗೇ ಮೋಡ ಕವಿದ ವಾತಾವರಣವೂ ಏರ್ಪಟ್ಟಿತ್ತು.

ಗುರುವಾರ ರಾತ್ರಿಯೂ ನಗರದ ಕೆಲವೆಡೆ ಸಾಧಾರಣ ಮಳೆ ಸುರಿಯಿತು. ರಾತ್ರಿ 11ರ ವೇಳೆಗೆ ಆರಂಭವಾದ ಮಳೆ ಕೆಲ ಗಂಟೆಗಳ ಕಾಲ ಆಗಾಗ ಬಿಡುವು ಪಡೆದು ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.