ADVERTISEMENT

ಪೌಷ್ಟಿಕ ಆಹಾರ ಪೂರೈಕೆ ಸ್ಥಗಿತ: ಮಕ್ಕಳು ಗೈರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 5:10 IST
Last Updated 4 ಜುಲೈ 2012, 5:10 IST

ಕಂಪ್ಲಿ: ಕಂಪ್ಲಿ ಪಟ್ಟಣದಲ್ಲಿರುವ ಸುಮಾರು 41ಅಂಗನವಾಡಿ ಕೇಂದ್ರಗಳಿಗೆ ಕಳೆದ ಒಂದು ತಿಂಗಳಿಂದ ಪೌಷ್ಟಿಕ ಆಹಾರ ಸರಬರಾಜು ಇಲ್ಲದ ಕಾರಣ ಕೆಲವು ಅಂಗನವಾಡಿಗಳಿಗೆ ಮಕ್ಕಳು ಬರುತ್ತಿಲ್ಲ.

ಈ ಹಿಂದೆ ಪೊಟ್ಟಣಗಳಲ್ಲಿ ಸರಬ ರಾಜು ಮಾಡುತ್ತಿದ್ದ ಪೌಷ್ಟಿಕ ಆಹಾರ ಪೂರೈಕೆಯನ್ನು ಬಂದ್ ಮಾಡಿದ್ದು, ಕೆಲ ಅಂಗನವಾಡಿ ಕೇಂದ್ರಗಳ ಕಾರ್ಯ ಕರ್ತರೇ ಸ್ವತಃ ಬಿಸ್ಕೆಟ್ ನೀಡುತ್ತಿದ್ದಾರೆ. ಪೌಷ್ಟಿಕ ಆಹಾರ ಇಲ್ಲದಿರುವುದನ್ನು ಅರಿತ ಕೆಲವು ಪಾಲಕರು ಅಂಗನವಾಡಿ ಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಮದ್ ಸರ್ವರ್ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ರಾಜ್ಯ ಹೈಕೋರ್ಟ್ ಪೌಷ್ಟಿಕ ಆಹಾರ ಪೂರೈಕೆ ಮಾಡುವ ಸಂಬಂಧ ಸಮಿತಿ ರಚಿಸಲು ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶಿಸಿದೆ. ಇನ್ನು 15ದಿನಗಳಲ್ಲಿ ಶೇಂಗಾ, ಹೆಸರುಕಾಳು ಇತ್ಯಾದಿಯನ್ನು ಒಳಗೊಂಡ  ಆಹಾರ ಪೊಟ್ಟಣ ನೂತನ ವ್ಯವಸ್ಥೆಯಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಿದ್ದಾರೆ.
 
ಅಲ್ಲಿಯವರೆಗೆ ಪರ್ಯಾಯವಾಗಿ ಇನ್ನು ಎರಡು ಮೂರು ದಿನಗಳಲ್ಲಿ ಎಲ್ಲಾ ಅಂಗನ ವಾಡಿಗಳಿಗೆ ಗೋದಿ, ಅಕ್ಕಿ ಸರಬರಾಜು ಮಾಡುವ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ ದೊರಕುವಂತೆ ನೋಡಿ ಕೊಳ್ಳಲಾಗುವುದು ಎಂದು ತಿಳಿಸಿದರು.

ತಾಂತ್ರಿಕ ತೊಂದರೆಯಿಂದ ಪೌಷ್ಟಿಕ ಆಹಾರ ಪೂರೈಕೆಯಲ್ಲಿ ವಿಳಂಬವಾಗಿದೆ. ಪಾಲಕರು, ಪೋಷಕರು ಸಹಕರಿಸಿ ತಮ್ಮ ಮಕ್ಕಳನ್ನು ಸಮೀಪದ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವಂತೆ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.