ADVERTISEMENT

‘ಮಾತೃಪೂರ್ಣ ಯೋಜನೆ ಬಡವರಿಗೆ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 5:50 IST
Last Updated 3 ಅಕ್ಟೋಬರ್ 2017, 5:50 IST

ಕುರುಗೋಡು:‘ಗರ್ಭಿಣಿಯರ ಹೆರಿಗೆ ಸಂದರ್ಭದಲ್ಲಿ ಮಕ್ಕಳ ಮರಣವನ್ನು ತಡೆಗಟ್ಟಲು ಮಾತೃಪೂರ್ಣ ಯೋಜನೆ ಸಹಾಯವಾಗಲಿದೆ’ ಎಂದು ಅಂಗನವಾಡಿ ಕಾರ್ಯಕರ್ತೆ ಶ್ರೀದೇವಿ ಹೇಳಿದರು.

ಇಲ್ಲಿಗೆ ಸಮೀಪದ ಗುತ್ತಿಗನೂರು ಗ್ರಾಮದಲ್ಲಿ ಸೋಮವಾರ ‘ಮಾತೃಪೂರ್ಣ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದರು.

‘ ಗರ್ಭಿಣಿಯರು ಆರೋಗ್ಯ ಕಡೆ ಹೆಚ್ಚಿನ ಕಾಳಜಿವಹಿಸಬೇಕು. ಇದರಿಂದ ಹುಟ್ಟುವಂತ ಮಕ್ಕಳು ಆರೋಗ್ಯಪೂರ್ಣವಾಗಿರುತ್ತವೆ. ಈ ಯೋಜನೆಯನ್ನು ಗರ್ಭಿಣಿಯರು ಅಸದುಪಯೋಗ ಪಡೆದುಕೊಳ್ಳ ಬೇಕು’ ಎಂದು ಹೇಳಿದರು.

ADVERTISEMENT

ಅಂಗನವಾವಾಡಿ ಕಾರ್ಯಕರ್ತೆಯರಾದ ಬಸಮ್ಮ ಮತ್ತು ಬಿ. ನಿಂಗಮ್ಮ ಇದ್ದರು.

ವದ್ದಟ್ಟಿ: ಇಲ್ಲಿಗೆ ಸಮೀಪದ ವದ್ದಟ್ಟಿ ಗ್ರಾಮದಲ್ಲಿ 4ನೇ ಅಂಗನವಾಡಿ ಕೇಂದ್ರದಲ್ಲಿ ‘ಮಾತೃಪೂರ್ಣ ಯೋಜನೆ’ ಸೋಮವಾರ ಚಾಲನೆ ನೀಡಲಾಯಿತು. ಬಳಿಕ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರವನ್ನು ಕಾರ್ಯಕರ್ತೆಯರು ವಿತರಿಸಿದರು. ಯೋಜನೆಯ ಜಾಗೃತಿಗಾಗಿ ಭಾನುವಾರ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಜಾಥಾ ನಡೆಸಿದರು. ಕಾರ್ಯಕರ್ತೆಯರಾದ ಎನ್.ಎಸ್. ಮೌನೇಶ್ವರಿ, ಎಸ್. ರುದ್ರಮ್ಮ, ಕೆ. ರಿಂದಮ್ಮ, ಕೆ.ಅಶ್ವಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.