ADVERTISEMENT

ಸಿಎಂ, ಸಚಿವರನ್ನು ನೀಡಿದ ಕ್ಷೇತ್ರ ಜಮಖಂಡಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 8:21 IST
Last Updated 8 ಏಪ್ರಿಲ್ 2013, 8:21 IST

ಜಮಖಂಡಿ ಮೀಸಲು ವಿಧಾನಸಭಾ ಮತಕ್ಷೇತ್ರ: ಕ್ಷೇತ್ರ ಪರಿಚಯ

ಮುಧೋಳ: ಮುಧೋಳ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅನ್ಯ ಕ್ಷೇತ್ರದ ಮತತದಾರರನ್ನು ಸೇರಿಸಲಾಗುತ್ತಿದೆ. ಇದಕ್ಕೆ ಸಚಿವ ಗೋವಿಂದ ಕಾರಜೋಳ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಜಿ ಸಚಿವ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಬಿ. ತಿಮ್ಮಾಪುರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ಇಂದು ಪ್ರತಿಭಟನಾ ಧರಣಿ ನಡೆಸಿದರು.

ಶನಿವಾರ ರಾತ್ರಿಯಿಂದಲೆ ಪ್ರತಿಭಟನೆ ನಡೆದಿದೆ. ಅಕ್ರಮವಾಗಿ ಬೇರೆ ತಾಲ್ಲೂಕಿನ ಜನರ ಹೆಸರು ಸೇರಿಸಲಾಗುತ್ತಿದೆ. ಸುಮಾರು ಎಂಟು ಸಾವಿರಕ್ಕೂ ಅಧಿಕ ನಕಲಿ ಮತದಾರರನ್ನು ಸೇರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಎಚ್.ಎ. ಕಡಪಟ್ಟಿ, ಲೋಕಣ್ಣ ಕೊಪ್ಪದ, ವೆಂಕಣ್ಣ ಸೋನ್ನದ, ಜಗನ್ನಾಥ ಪವಾರ, ಶಿವನಗೌಡ ಪಾಟೀಲ, ಮಹಾದೇವ ಹೊಸಟ್ಟಿ, ಸದಾಶಿವ ಬಾಗೋಡಿ, ಸದಾಶಿವ ತೇಲಿ, ಪ್ರಕಾಶ ಲಿಂಬಿಕಾಯಿ ಮುಂತಾದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಘಟನಾ ಸ್ಥಳಕ್ಕೆ ಕಂದಾಯ ಉಪವಿಭಾಗಾಧಿಕಾರಿ ರಮೇಶ ದುಡದುಂಟಿ, ಡಿಎಸ್‌ಪಿ ಗಿರೀಶ ಕಾಂಬಳೆ ಭೇಟಿ ನೀಡಿ ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಪ್ರತಿಭಟನಾಕಾರರಿಗೆ ನೀಡಿದರು.

ಅಮಾನತು: ತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರ್ಪಡೆಗೆ ಕಾರಣಕರ್ತರೆಂದು ಆರೋಪಿಸಲಾದ ದ್ವಿತೀಯ ದರ್ಜೆ ಗುಮಾಸ್ತ ಎಸ್.ಐ. ಘಾಟ್ನಿ ಆವರನ್ನು ಜಿಲ್ಲಾಧಿಕಾರಿ ಸಸ್ಪೆಂಡ್ ಮಾಡಿದ್ದಾರೆ.

`ಪ್ರಜಾವಾಣಿ'ಯೊಂದಿಗೆ  ತಹಶೀಲ್ದಾರ್ ಎಂ.ಎನ್. ಚೋರಗಸ್ತಿ  ಮಾತನಾಡಿ,  ಮತದಾರರ ಪಟ್ಟಿಯಲ್ಲಿ ಆಕ್ರಮವಾಗಿ ಹೆಸರು ಸೇರಿಸಲು ಸಾಧ್ಯವಿಲ್ಲ. 2119 ಜನರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 1385 ಹೆಸರುಗಳನ್ನು ಇನ್‌ವರ್ಡ್ ಮಾಡಿಕೊಳ್ಳಲಾಗಿದೆ. 1874 ಜನರು ತಿದ್ದುಪಡಿಗಾಗಿ, 37 ಜನರು ಮತಗಟ್ಟೆ ಬದಲಿಗಾಗಿ ಹಾಗೂ 895 ಅರ್ಜಿಗಳು ಹೆಸರು ತೆಗೆದು ಹಾಕಲು ಅರ್ಜಿ ಬಂದಿವೆ. ಸೇರ್ಪಡೆಗೆ ಅರ್ಜಿ ಸಲ್ಲಿಸಿದಾಕ್ಷಣ ಮತದಾರರ ಪಟ್ಟಿಯಲ್ಲಿ ಹೆಸರು ಬರುವುದಿಲ್ಲ. ಅರ್ಜಿ ಸಲ್ಲಿಸಿದವರ ವಿವರಗಳನ್ನು ಬೂತ್‌ಮಟ್ಟದ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಅನುಮೋದಿಸಿದ ನಂತರ ಸೇರ್ಪಡೆ ಮಾಡಲಾಗುತ್ತದೆ.

ಸೇರ್ಪಡೆಯಾದವರ ಹೆಸರುಗಳನ್ನು ಬೋರ್ಡ್‌ಮೇಲೆ ಹಚ್ಚಿ ಆಕ್ಷೇಪಣೆಗೆ ಕಾಲಾವಕಾಶ ನೀಡುತ್ತದೆ. ಯಾವ ಆಕ್ಷೇಪಣೆಯೂ ಬರದಿದ್ದರೆ ಅಂಥವರ ಹೆಸರು ಮತದಾರರ ಪಟ್ಟಿಯಲ್ಲಿ ಬರುತ್ತದೆ. ಅಲ್ಲದೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನೇರವಾಗಿ ಆನ್‌ಲೈನ್ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.

ಕಾರಜೋಳ ಸ್ಪಷ್ಟನೆ: ಈ ಪ್ರಕರಣದಲ್ಲಿ ನನ್ನ ಹೆಸರು ವೃಥಾ ಬಳಕೆಯಾಗುತ್ತಿದೆ. ಇದೊಂದು ಚುನಾವಣಾ ಗಿಮಿಕ್ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಮತದಾನದ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಬರುವ ಮುನ್ನ ಪ್ರಕಟಣೆ ಮಾಡಿದಾಗ ಆಕ್ಷೇಪಣೆ ಸಲ್ಲಿಸಬಹುದು. ಕಾನೂನು ಬದ್ಧವಾಗಿ ಮಾಡಬೇಕಾದ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT