ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಬುಧವಾರ ಸಂಜೆ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಜರುಗಿತು.
ಸ್ವಾಮಿಯ ಉತ್ಸವ ಮೂರ್ತಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಸಂಪ್ರದಾಯದಂತೆ ಗಂಗಾಮತ ಸಮುದಾಯದ ಹೇಮಪ್ಪ ಗೋರಪ್ಪನವರ ಕುಟುಂಬದವರು ರಥಕ್ಕೆ ನೈವೇದ್ಯ ಸಮರ್ಪಣೆ ನಂತರ ಅಪಾರ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ರಥೋತ್ಸವ ಪ್ರಾರಂಭವಾಯಿತು.
ಸಮಾಳ, ನಂದಿಕೋಲು, ಮಂಗಳ ವಾದ್ಯ, ಗೊಂಬೆ ಕುಣಿತ, ಡೊಳ್ಳು ಕುಣಿತದ ವೈಭವ ರಥೋತ್ಸವದ ಮೆರಗು ಹೆಚ್ಚಿಸಿತ್ತು.
ಇಂದು ಅಗ್ನಿಕುಂಡ: ವೀರಭದ್ರೇಶ್ವರ ಜಾತ್ರೆ ಪ್ರಯುಕ್ತ ಗುರುವಾರ ಮಧ್ಯಾಹ್ನ 12.30ಕ್ಕೆ ಅಗ್ನಿಕುಂಡ, ಸಂಜೆ ಓಕಳಿ ಉತ್ಸವ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.