ADVERTISEMENT

ಬಸವ ಭವನ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 7:21 IST
Last Updated 21 ಏಪ್ರಿಲ್ 2022, 7:21 IST
ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಭಸವ ಭವನ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮೂಡ ಚಾಲನೆ ನೀಡಿದರು
ಕಮಲಾಪುರ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಭಸವ ಭವನ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮೂಡ ಚಾಲನೆ ನೀಡಿದರು   

ಕಮಲಾಪುರ: ತಾಲ್ಲೂಕಿನ ನಾಗೂರ ಗ್ರಾಮದ ಹಾಲ ಬಸವೇಶ್ವರ ದೇವಸ್ಥಾನದ ದ್ವಾರವನ್ನು ಶಾಸಕ ಬಸವರಾಜ ಮತ್ತಿಮೂಡ ಬುಧವಾರ ಉದ್ಘಾಟಿಸಿದರು. ₹ 50 ಲಕ್ಷ ವೆಚ್ಚದ ಬಸವ ಭವನ ಕಾಮಗಾರಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬಸವ ಭವನಕ್ಕೆ ಈಗಾಗಲೇ ₹ 50 ಲಕ್ಷ ಒದಗಿಸಲಾಗಿದೆ. ₹1 ಕೋಟಿ ಒದಗಿಸುವುದಾಗಿ ಸಚಿವರು ತಿಳಿಸಿದ್ದಾರೆ ಎಂದರು.

ವೈಯಕ್ತಿಕ ₹ 7 ಲಕ್ಷ ವೆಚ್ಚದಲ್ಲಿ ದ್ವಾರ ನಿರ್ಮಾಣ ಮಾಡಿದ್ದೇನೆ. ದೇವಸ್ಥಾನದವರಗೆ ರಸ್ತೆ ಡಾಂಬರೀಕರಣ ಮಾಡಿಸಿದ್ದೇನೆ. ₹2 ಕೋಟಿಯಲ್ಲಿ ವಿವಿಧ ಮಠಗಳಿಗೆ ಅನುದಾನ ಹಂಚಿಕೆ ಮಾಡಿದ್ದೇನೆ. 5 ತಾಲ್ಲೂಕುಗಳನ್ನೊಳಗೊಂಡ ದೊಡ್ಡ ಮತಕ್ಷೇತ್ರವಾಗಿದ್ದು. ಸಾಕಷ್ಟು ಕೆಲಸ ಮಾಡಿದ್ದೇನೆ. ದಾಖಲೆ ಒದಗಿಸುತ್ತೇನೆ ಸಂಶಯವಿದ್ದವರು ಪರಿಶೀಲಿಸಬಹುದು ಎಂದರು.

ADVERTISEMENT

ಬಸವ ಜಯಂತಿ ಉತ್ಸವ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಬಿರಾದಾರ ಮಾತನಾಡಿ, ಇದೇ ಏ. 22 ರಂದು ರೇಣುಕಾಚಾರ್ಯ ಜಯಂತಿ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಮೇ. 3 ರಂದು ಬಸವ ಜಯಂತಿ ಆಚರಿಸಲಾಗುತ್ತಿದೆ. ಮೇ.1, 2 ರಂದು ವೇದಿಕೆ ಕಾರ್ಯಕ್ರಮಗಳಿವೆ. 3 ರಂದು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ತಾವರಗೇರಾ ಗ್ರಾಮದಲ್ಲಿಶಾಸಕರ ಅನುದಾನದಲ್ಲಿ ನಿರ್ಮಿಸಿದ ಸಮವ್ವ ದೇವಸ್ಥಾನ ಉದ್ಘಾಟಿಸಲಾಯಿತು.

ಅಲ್ಲಮಪ್ರಭು ಸ್ವಾಮೀಜಿ, ಶಿವಪ್ರಭು ಪಾಟೀಲ, ಸಂಗಮೇಶ ವಾಲಿ, ಮಲ್ಲಿಕಾರ್ಜುನ ಮರತೂರ, ಶಾಂತಾಬಾಯಿ ಹಾಲಮಠ, ರಾಜು ಉಪ್ಪಿನ್‌, ನರೇಶ ಹರಸೂರಕರ್‌, ಶೇರಬಾನು, ಕೇದರನಾಥ ಅಂಬಲಗಿ, ರ‍್ಯಾವಪ್ಪ ಏರಿ, ಚಂದ್ರಶೇಖರಯ್ಯ, ಸಂತೋಷ ಪಾಟೀಲ, ಗಣೇಶ ಕಣ್ಣೂರ, ಮಹಾದೇವ ಸಂಗಶೆಟ್ಟಿ, ಸತೀಶ ಸುರಡೆ, ವೀರೇಶ ಬಿರಾದಾರ, ಶರಣಗೌಡ, ಪರಮೇಶ್ವರ ಧಾಕಲಿ, ಧನರಾಜ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.