ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ಮೆಹಬೂಬ್ ಸುಭಾನಿ ಉರುಸು ವೈಭವದಿಂದ ಜರುಗಿತು.
ಗ್ರಾಮದ ದರಗಾದಲ್ಲಿ ಹಿಂದೂ ಮುಸ್ಲಿಮರು ಏಕಕಾಲದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಧಾರ್ಮಿಕ ಭಾವೈಕ್ಯ ಮೆರೆದರು. ಹೊಳಲು, ಸುತ್ತಮುತ್ತಲ ಗ್ರಾಮಗಳ ಭಕ್ತರು ಸಕ್ಕರೆ ನೈವೇದ್ಯ ಅರ್ಪಿಸಿದರು.
ಕೆಲವರು ದೀಡ್ ನಮಸ್ಕಾರ ಸೇರಿದಂತೆ ವಿವಿಧ ಬಗೆಯ ಹರಕೆಗಳನ್ನು ಭಕ್ತಿಭಾವದಿಂದ ಸಲ್ಲಿಸಿದರು. ರೈತರು ಸಿಂಗರಿಸಿದ ಎತ್ತಿನ ಬಂಡಿ ಸಮೇತ ದರಗಾಕ್ಕೆ ಬಂದು ಭಕ್ತರಿಗೆ ಪಾನಕ ವಿತರಿಸಿದರು. ಶನಿವಾರ, ಭಾನುವಾರ ಬಹಿರಂಗ ಕುಸ್ತಿ ಪಂದ್ಯಾವಳಿ ಜರುಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.