ಬಳ್ಳಾರಿ: ಕುರುಗೋಡು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಏ. 16ರಂದು ಇಬ್ಬರು ಬಾಲಕಿಯರಿಗೆ ವಿವಾಹ ನಡೆದಿದ್ದು, ವರರೂ ಸೇರಿ ಒಟ್ಟು 6 ಮಂದಿ ವಿರುದ್ಧ ಮೇ 26ರಂದು ಪ್ರಕರಣ ದಾಖಲಾಗಿದೆ.
ಬಾಲಕಿಯರಿಗೆ ವಿವಾಹ ನಡೆಯುತ್ತಿರುವುದಾಗಿ ಮಕ್ಕಳ ಸಹಾಯವಾಣಿಗೆ ಏ. 15ರಂದು ಕರೆ ಬಂದಿತ್ತು ಎನ್ನಲಾಗಿದೆ. ಇದನ್ನು ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಏ. 16ರಂದು ಬೆಳಿಗ್ಗೆ 8 ಗಂಟೆಗೆ ಮದುವೆ ನಡೆಯುತ್ತಿರುವ ಸೋಮಲಾಪುರಕ್ಕೆ ತೆರಳಿದ್ದರು. ಆದರೆ, ಅಧಿಕಾರಿಗಳು ಸ್ಥಳಕ್ಕೆ ಹೋಗುವುದಕ್ಕೂ ಮೊದಲೇ, (ಬೆಳಿಗ್ಗೆ 5.30ಕ್ಕೆ) ಇಬ್ಬರೂ ಬಾಲಕಿಯರ ವಿವಾಹ ನಡೆದಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ, ಬಿ. ಮಂಜುಳಾ, ಯಲ್ಲಪ್ಪ, ರೇಣುಕಮ್ಮ, ವೀರಾಪುರ ಸಿದ್ಧಮ್ಮ, ವಿ. ಶಿವಾನಂದ, ಚಿದಾನಂದ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಒಬ್ಬ ಬಾಲಕಿಗೆ 17 ವರ್ಷ 10 ತಿಂಗಳು ವಯಸ್ಸಾಗಿದ್ದರೆ, ಮತ್ತೊಬ್ಬ ಬಾಲಕಿಗೆ 16 ವರ್ಷ 8 ತಿಂಗಳಾಗಿತ್ತು ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.