ADVERTISEMENT

‘ಬದುಕಿನ ಗುಣಮಟ್ಟ ಹೆಚ್ಚಿಸುವ ಆವಿಷ್ಕಾರಕ್ಕೆ ಬೇಡಿಕೆ’

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 13:17 IST
Last Updated 3 ಏಪ್ರಿಲ್ 2019, 13:17 IST
ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸ್ವಯಂಚಾಲಿತ ರೋಬೊ ಪ್ರದರ್ಶಿಸಿದರು
ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸ್ವಯಂಚಾಲಿತ ರೋಬೊ ಪ್ರದರ್ಶಿಸಿದರು   

ಹೊಸಪೇಟೆ: ರಾಜ್ಯಮಟ್ಟದ ತಾಂತ್ರಿಕ ಪ್ರಾಜೆಕ್ಟ್‌ ಪ್ರದರ್ಶನ ‘ಇನ್ನೊವಿಷನ್‌–2019’ ಇಲ್ಲಿನ ಪ್ರೌಢದೇವರಾಯ ಕಾಲೇಜಿನಲ್ಲಿ ಬುಧವಾರ ನಡೆಯಿತು.

ಕೃಷಿ, ಆರೋಗ್ಯ, ಭದ್ರತೆ, ಬಯೊಮೆಟ್ರಿಕ್‌, ಸೈಬರ್ ಅಪರಾಧ, ಹೈಬ್ರಿಡ್ ಕಾರು, ಸೌರಶಕ್ತಿ ಆಧಾರಿತ ಬೈಸಿಕಲ್, ಆರ್ಡಿನೋ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಒಟ್ಟು 106 ಪ್ರಾಜೆಕ್ಟ್‌ಗಳು ಪ್ರದರ್ಶನಗೊಂಡವು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಕಿರ್ಲೊಸ್ಕರ್‌ ಫೆರಸ್‌ ಕಂಪನಿಯ ಹಿರಿಯ ಉಪಾಧ್ಯಕ್ಷ ಪಿ. ನಾರಾಯಣ, ‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಆವಿಷ್ಕಾರ ಮನೋಭಾವ ಬೆಳೆಸಿಕೊಂಡರಷ್ಟೇ ಯಶಸ್ಸು ಗಳಿಸಲು ಸಾಧ್ಯ. ಅದರಲ್ಲೂಬದುಕಿನ ಗುಣಮಟ್ಟ ಹೆಚ್ಚಿಸುವ, ಉತ್ಪನ್ನಗಳ ಮೌಲ್ಯ ಹೆಚ್ಚಿಸುವ ಹೊಸ ಆವಿಷ್ಕಾರಗಳಿಗೆ ಪ್ರಯತ್ನಿಸಬೇಕು. ಇಂದಿನ ಉದ್ದಿಮೆಗಳಲ್ಲಿ ಆವಿಷ್ಕಾರ ಪ್ರವೃತ್ತಿ ಇರುವವರಿಗೆ ಹೆಚ್ಚಿನ ಅವಕಾಶಗಳಿವೆ’ ಎಂದು ತಿಳಿಸಿದರು.

ADVERTISEMENT

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಟಿ. ಕೊಟ್ರಪ್ಪ, ‘ಪ್ರತಿಯೊಬ್ಬ ತಂತ್ರಜ್ಞ ಕನಸುಗಾರನಾಗಬೇಕು. ಹಸಿದ ಮನಗಳಲ್ಲಿ ಕನಸು ಚಿಗುರೊಡೆಯುವುದು ಸಹಜ. ಅವರು ಮುಂದೆ ಉದ್ಯಮಿಗಳಾಗಿ ಯಶಸ್ಸು ಗಳಿಸುವರು’ ಎಂದರು.

ಆಡಳಿತ ಮಂಡಳಿಯ ಅಧ್ಯಕ್ಷ ಜಾನೆಕುಂಟೆ ಬಸವರಾಜ, ಪ್ರಾಂಶುಪಾಲ ಎಸ್.ಎಂ. ಶಶಿಧರ, ಪ್ರಾಧ್ಯಾಪಕರಾದಇಂದಿರಾ, ವೀರಭದ್ರಪ್ಪ ಅಲ್ಗೂರ, ಫಿರ್ದೋಸ್ ಪರ್ವೀನ್, ಜೀವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.