ಬಳ್ಳಾರಿ: ನಗರದ ಲಿಮ್ರ ರೇಷ್ಮೆ ಮತ್ತು ಹತ್ತಿ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘಕ್ಕೆ ಓಬಳಪತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಓಬಳಪತಿ, ಟಸಂಘವು ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿತ್ತು. ಇಂದು ಮರುಚಲನೆ ನೀಡಿದ್ದೇವೆ. ಕೈಮಗ್ಗ ನೇಕಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಮತ್ತು ಕೈಮಗ್ಗ ನೇಕಾರರ ಮಹಾಮಂಡಳಿಯಿಂದ ದೊರೆಯುವ ಆರ್ಥಿಕ ನೆರವನ್ನು ಕಲ್ಪಿಸಿ, ಸಂಘದಲ್ಲಿರುವ ಸದಸ್ಯರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.
ಕಳೆದ 25 ವರ್ಷಗಳ ಹಿಂದೆ ನೋಂದಣಿಯಾದ ಸಂಘವು ಕೇವಲ 70 ಜನ ಸದಸ್ಯರೊಂದಿಗೆ ಆರಂಭಗೊಂಡು ಈಗ ಸುಮಾರು 686 ಜನ ಸದಸ್ಯರನ್ನು ಒಳಗೊಂಡಿದೆ.
ಸಂಘಕ್ಕೆ ಕಾರ್ಯದರ್ಶಿಯಾಗಿ ವೀರಾಂಜನೇಯಲು, ಉಪಾಧ್ಯಕ್ಷರಾಗಿ ಕೆ. ರಾಮಕೃಷ್ಣ ರೆಡ್ಡಿ, ನಿರ್ದೇಶಕರಾಗಿ ಅರ್ಜುನ್ ರೆಡ್ಡಿ, ಕಲಾವತಿ, ನಾಗೇಶ್, ಸರಸ್ವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.