ADVERTISEMENT

ನಾಲ್ವರ ವಿರುದ್ಧ ದೂರು ದಾಖಲು

ಗಾಂಜಾ ಗಿಡಗಳ ವಶಕ್ಕೆ ತೆರಳಿದ್ದ ಸಿಬ್ಬಂದಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 5:08 IST
Last Updated 23 ಸೆಪ್ಟೆಂಬರ್ 2022, 5:08 IST
ಸಂಡೂರು ತಾಲ್ಲೂಕಿನ ಸಿ.ಕೆ. ಹಳ್ಳಿಯ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದರು
ಸಂಡೂರು ತಾಲ್ಲೂಕಿನ ಸಿ.ಕೆ. ಹಳ್ಳಿಯ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದರು   

ಸಂಡೂರು:ಗಾಂಜಾಗಿಡವಶಕ್ಕೆಪಡೆ ಯಲುಹೋಗಿದ್ದಕಂದಾ ಯಮತ್ತುಅ ಬಕಾರಿಇಲಾ ಖೆಸಿಬ್ಬಂದಿಮೇಲೆಹಲ್ಲೆನಡೆಸಿ ರುವಘಟನೆ ತಾಲ್ಲೂಕಿನ ಚಿಕ್ಕಕೆರೆಯಾಗಿನಹಳ್ಳಿ (ಸಿ.ಕೆ.ಹಳ್ಳಿ)ಯಲ್ಲಿ ನಡೆದಿದೆ.

ಶ್ರೀರಾಮಶೆಟ್ಟಿಹಳ್ಳಿಯ ಕೋಟೆಪ್ಪ (41), ನರಸಿಂಹ (37), ಮಂಜು (32) ಹಾಗೂ ಸಿ.ಕೆ. ಹಳ್ಳಿಯ ಚಿನ್ನಪ್ಪ (25) ಆರೋಪಿಗಳು. ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಚಿಕ್ಕಕೆರೆಯಾಗಿನಹಳ್ಳಿ (ಸಿ.ಕೆ.ಹಳ್ಳಿ)ಯ ಜಮೀನಿನಲ್ಲಿ ಶ್ರೀರಾಮಶೆಟ್ಟಿಹಳ್ಳಿಯ ಮರಿಯಪ್ಪ ಎಂಬುವರು ಗಾಂಜಾ ಬೆಳೆದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ತೆರಳಿದ್ದರು. ಅಬಕಾರಿ ಇಲಾಖೆ ನಿರೀಕ್ಷಕ ಜಗದೀಶ್ ಕಬ್ಬೂರ್ ಅವರು ತಾಲ್ಲೂಕಿನ ಚೋರುನೂರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ಅಬಕಾರಿ ಅಧಿಕಾರಿಗಳು ಒಟ್ಟು 12 ಕೆ.ಜಿ ಹಾಗೂ 480 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ವಿಷ ಕುಡಿಯಲು ಆರೋಪಿ ಯತ್ನ: ಅಕ್ರಮವಾಗಿ ಬೆಳೆದ ಗಾಂಜಾ
ಗಿಡಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಂತೆ, ಆರೋಪಿ ಮರಿಯಪ್ಪ ವಿಷ ಕುಡಿಯಲು ಯತ್ನಿಸಿ, ಅಸ್ವಸ್ಥನಾಗಿದ್ದಾನೆ. ಕೂಡಲೆ ಆರೋಪಿಯನ್ನು ಕೂಡ್ಲಿಗಿಯ ಆಸ್ಪತ್ರೆಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ತಹಶೀಲ್ದಾರ್ ಕೆ.ಎಂ. ಗುರುಬಸವರಾಜ, ಅಬಕಾರಿ ಅಧಿಕಾರಿ ಬಸವರಾಜ ಮತ್ತು ಸಿಬ್ಬಂದಿ ಉಪಸ್ಥಿ ತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.