ADVERTISEMENT

ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 13:55 IST
Last Updated 17 ಆಗಸ್ಟ್ 2022, 13:55 IST
ಹೊಸಪೇಟೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಿಬಿರದಲ್ಲಿ ವೈದ್ಯರು ಆರೋಗ್ಯ ತಪಾಸಣೆ ಮಾಡಿದರು
ಹೊಸಪೇಟೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಿಬಿರದಲ್ಲಿ ವೈದ್ಯರು ಆರೋಗ್ಯ ತಪಾಸಣೆ ಮಾಡಿದರು   

ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿಯ ಬಿ.ಎಂ.ಡಿ. ಆಸ್ಪತ್ರೆ ಹಾಗೂ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಭಾಗಿತ್ವದಲ್ಲಿ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ನೂರಾರು ಜನ ಕಾರ್ಮಿಕರು ಭಾಗವಹಿಸಿದರು.

ಶಿಬಿರದಲ್ಲಿ ಕಿಡ್ನಿ, ಥೈರಾಯ್ಡ್, ಕ್ಯಾಲ್ಷಿಯಂ, ಮಧುಮೇಹ, ಕಣ್ಣಿನ ಪರೀಕ್ಷೆ, ಶ್ವಾಸಕೋಶ ಸೇರಿದಂತೆ 19 ಪರೀಕ್ಷೆಗಳನ್ನು ಮಾಡಲಾಯಿತು. ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಯಿತು. ಶಿಬಿರಕ್ಕೆ ಕಾರ್ಮಿಕ ಇಲಾಖೆಯ ಇನ್‌ಸ್ಪೆಕ್ಟರ್‌ ಎಂ.ಅಶೋಕ ಚಾಲನೆ ನೀಡಿದರು.

ವೈದ್ಯರಾದ ಡಾ.ಬಿ.ಎಂ.ಡಿ. ಬಸವರಾಜ, ಡಾ. ಶ್ರೀಕಾಂತ್, ಡಾ.ಎಂ.ಕವಿತಾ ಬಸವರಾಜ, ಬಿ.ಎಂ.ಡಿ. ಆಸ್ಪತ್ರೆಯ ವ್ಯವಸ್ಥಾಪಕ ಪ್ರದೀಪ್ ಪಾಟೀಲ್, 25 ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು. ಕಟ್ಟಡ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಜಿ.ಮೋಹನ್, ಸೋಮಶೇಖರ್ ಬಣ್ಣದಮನೆ, ಲಿಯಾಕತ್ ಅಲಿ ಇತರರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.