ADVERTISEMENT

ನರೇಗಾ ಪರಿಹಾರ ಭತ್ಯೆ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:42 IST
Last Updated 6 ಜೂನ್ 2025, 15:42 IST
ಹೂವಿನಹಡಗಲಿ ತಾಲ್ಲೂಕು ಕೆ.ಅಯ್ಯನಹಳ್ಳಿಯಲ್ಲಿ ನರೇಗಾ ಕಾರ್ಮಿಕರು ಕೂಲಿ ಭತ್ಯೆ ಹೆಚ್ಚಳಕ್ಕೆ ಒತ್ತಾಯಿಸಿ ಪತ್ರ ಚಳವಳಿ ನಡೆಸಿದರು.
ಹೂವಿನಹಡಗಲಿ ತಾಲ್ಲೂಕು ಕೆ.ಅಯ್ಯನಹಳ್ಳಿಯಲ್ಲಿ ನರೇಗಾ ಕಾರ್ಮಿಕರು ಕೂಲಿ ಭತ್ಯೆ ಹೆಚ್ಚಳಕ್ಕೆ ಒತ್ತಾಯಿಸಿ ಪತ್ರ ಚಳವಳಿ ನಡೆಸಿದರು.   

ಹೂವಿನಹಡಗಲಿ: ‘ನರೇಗಾ ಕೂಲಿ ಕಾರ್ಮಿಕರಿಗೆ ಎರಡು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಕೂಲಿ ಮೊತ್ತವನ್ನು ಸರ್ಕಾರ ಬಡ್ಡಿ ಸಮೇತ ಪಾವತಿಸಬೇಕು’ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.

ತಾಲ್ಲೂಕಿನ ನವಲಿ, ತಿಪ್ಪಾಪುರ, ಶಿವಪುರ, ಕೆ.ಅಯ್ಯನಹಳ್ಳಿ ಇತರೆ ಗ್ರಾಮಗಳಲ್ಲಿ ನರೇಗಾ ಕಾರ್ಮಿಕರು ಹಾಗೂ ಗ್ರಾಕೂಸ ಸದಸ್ಯರು ಶುಕ್ರವಾರ ಕಾಮಗಾರಿ ಸ್ಥಳದಲ್ಲಿ ಪತ್ರ ಚಳವಳಿ ನಡೆಸಿದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ತಾಲ್ಲೂಕು ಸಂಚಾಲಕ ಶಬ್ಬೀರ್ ಬಾಷಾ ಮಾತನಾಡಿ, ನರೇಗಾ ಅನುಷ್ಠಾನ ಸಂದರ್ಭದಲ್ಲಿ ಕೂಲಿ ಪರಿಹಾರ ಭತ್ಯೆ ಶೇ 5 ರಷ್ಟು ನಿಗದಿಗೊಳಿಸಿದ್ದು, 20 ವರ್ಷಗಳಾದರೂ ಪರಿಷ್ಕರಣೆಯಾಗಿಲ್ಲ. ಕೂಲಿ ಭತ್ಯೆಯನ್ನು ಶೇ 25ಕ್ಕೆ ಹೆಚ್ಚಿಸಬೇಕು. ವಿಭಕ್ತ ಕುಟುಂಬಗಳು ಹೊಸ ಉದ್ಯೋಗ ಚೀಟಿ ಪಡೆಯಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಗಳಿಗೆ ಎಡಿಟ್ ಆಪ್ಷನ್ ನೀಡಬೇಕು ಎಂದು ಆಗ್ರಹಿಸಿದರು. ಗ್ರಾಕೂಸ ತಾಲ್ಲೂಕು ಪ್ರತಿನಿಧಿಗಳಾದ ಐನಳ್ಳಿ ಮಹಾಬಲೇಶ, ಈರಮ್ಮ, ಕೆ.ಎಂ.ಇಲಾಜ್, ವೈ.ಯಲ್ಲಮ್ಮ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.