ಕಂಪ್ಲಿ: ಇಲ್ಲಿಯ ಕೋಟೆ ಪ್ರದೇಶದ ಪಟ್ಟಾಭಿರಾಮಚಂದ್ರ ದೇವಸ್ಥಾನದ ರಾಯರ ಮಠದಲ್ಲಿ ಜಯತೀರ್ಥ ಗುರುಸಾರ್ವಭೌಮರ ಮಧ್ಯಾರಾಧನೆ ಮಂಗಳವಾರ ಭಕ್ತಿಭಾವದಿಂದ ಜರುಗಿತು.
ದೇವಸ್ಥಾನದಲ್ಲಿ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತಾಭಿಷೇಕ, ಭಜನೆ, ಪಲ್ಲಕ್ಕಿ ಉತ್ಸವ, ನೈವೇದ್ಯ, ಹಸ್ತೋದಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಯರ ಬೃಂದಾವನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಕಂಪ್ಲಿ ಗುರು ರಾಘವೇಂದ್ರ ಸಾರ್ವಭೌಮರ ಮಠದ ಅರ್ಚಕ ಕಿಶೋರಾಚಾರ್, ಅಮೃತ ಶಿಲಾರಾಮಚಂದ್ರದೇವರ ಅರ್ಚಕರಾದ ಶ್ರೀನಿವಾಸಾಚಾರ್, ರಾಘವೇಂದ್ರಚಾರ್ ಗುಡಿ ಪೌರೋಹಿತ್ಯದಲ್ಲಿ ಮಧ್ಯಾರಾಧನೆ ಕಾರ್ಯಕ್ರಮಗಳು ನಡೆದವು. ಬ್ರಾಹ್ಮಣ ಸುವಾಸಿನಿಯರು, ಕೋಟೆಯ ರಾಯರ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.