ಕುರುಗೋಡು: ಭಾನುವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಮಳೆ ನಿರಂತರವಾಗಿ ೨೦ ನಿಮಿಷ ಮಳೆ ಸುರಿಯಿತು.
ಬೆಳಿಗ್ಗೆಯಿಂದ ವಾತಾವರಣ ತೀವ್ರ ಬಿಸಿಲಿನಿಂದ ಕೂಡಿತ್ತು. ಜನರು ಬಿಸಿಲಿನ ಪ್ರಖರತೆಗೆ ತತ್ತರಿಸಿದ್ದರು. ಏಕಾಏಕಿ ಮಳೆ ಸುರಿಯಿತು. ನಂತರ ಬೀಸಿದ ಬಿರುಗಾಳಿಯಿಂದ ಮಳೆ ನಿಂತಿತು. ಜಮೀನುಗಳಲ್ಲಿ ಒಣಗಿಸಲು ಹಾಕಿದ್ದ ಬೇಸಿಗೆ ಹಂಗಾಮಿನ ಭತ್ತ ಮಳೆಗೆ ತೋಯ್ದವು. ರಕ್ಷಣೆ ಮಾಡಲು ರೈತರು ತಾಡಪಲುಗಳಿಗಾಗಿ ತಡಕಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.