ADVERTISEMENT

ಜೈಲಿನಲ್ಲಿ ಹೇಗಿರಬೇಕು? ವಕೀಲರಿಂದ ದರ್ಶನ್‌ಗೆ ಪತ್ರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 15:50 IST
Last Updated 16 ಸೆಪ್ಟೆಂಬರ್ 2024, 15:50 IST
ದರ್ಶನ್‌ 
ದರ್ಶನ್‌    

ಬಳ್ಳಾರಿ: ಇಲ್ಲಿನ ಕಾರಾಗೃಹದಲ್ಲಿ ಇರುವ ಕೊಲೆ ಆರೋಪಿ, ನಟ ದರ್ಶನ್‌ಗೆ ವಕೀಲರ ತಂಡವು ಪತ್ರ ಬರೆದು ‘ಜೈಲಿನಲ್ಲಿ ಹೇಗಿರಬೇಕು’ ಎಂಬ ಬಗ್ಗೆ ಸಲಹೆ, ಸೂಚನೆ ನೀಡಿದೆ. ಕೈದಿಗಳಿಗೆ ಕುಟುಂಬಸ್ಥರು, ವಕೀಲರು ಪತ್ರ ಬರೆಯಲು ಅವಕಾಶವಿದೆ. ಕಾರಾಗೃಹದ ಅಧಿಕಾರಿಗಳು ಪತ್ರವನ್ನು ಪರಿಶೀಲಿಸಿ, ದರ್ಶನ್‌ಗೆ ನೀಡಿದ್ದಾರೆ.

‘ವಕೀಲರಿಂದ ಬಂದಿರುವ ಪತ್ರದಲ್ಲಿ ಕೆಲವಷ್ಟು ವೈಯಕ್ತಿಕ ವಿಚಾರಗಳಿವೆ. ಪತ್ರದ ಜೊತೆ ಭಗವದ್ಗೀತೆ ಕಳುಹಿಸಿರುವ ಬಗ್ಗೆ ಉಲ್ಲೇಖವಿದೆ. ಆದರೆ, ಅದು ಪತ್ತೆಯಾಗಿಲ್ಲ’ ಎಂದು ಕಾರಾಗೃಹದ ಅಧಿಕಾರಿಯೊಬ್ಬರು ತಿಳಿಸಿದರು.

‘ದರ್ಶನ್‌ಗೆ ಟಿವಿ ಕೊಡಲು ನಿರ್ಧರಿಸಲಾಗಿದೆ. ಆದರೆ, ಬೆರಳು ತೋರಿಸಿದ ಘಟನೆಯಿಂದ ಟಿ.ವಿ ನೀಡುವುದು ವಿಳಂಬ ಮಾಡಲಾಗಿದೆ. ಇದು ಶಿಕ್ಷೆಯ ಕ್ರಮವೇನಲ್ಲ. ಆದರೆ, ಅವರಿಗೆ ಟಿವಿ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಭೇಟಿಗೆ ಇಂಥವರೇ ಬರಬೇಕೆಂದು ದರ್ಶನ್‌ ಕೇಳಿಲ್ಲ. ಈ ವಾರ ಜೈಲಿಗೆ ಅವರ ಕುಟುಂಬದಿಂದ ಯಾರು ಬರುತ್ತಿದ್ದಾರೆ ಎಂಬ ಬಗ್ಗೆ ಸದ್ಯ ಮಾಹಿತಿ ಇಲ್ಲ’ ಎಂದು ಅವರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.