ADVERTISEMENT

ನಿಮ್ಮ ಶಾಸಕರ ನಿಲುವು ಸರಿಯೇ? ಅಂಕಣಕ್ಕೆ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 12:03 IST
Last Updated 1 ಆಗಸ್ಟ್ 2019, 12:03 IST
ಎಚ್‌.ಎಸ್‌. ನಾಗರಾಜ, ಹೋಸಪೇಟೆ
ಎಚ್‌.ಎಸ್‌. ನಾಗರಾಜ, ಹೋಸಪೇಟೆ   

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಒಂದುವರೆ ವರ್ಷವಾಗುತ್ತ ಬಂದಿದೆ. ಕುಮಾರಸ್ವಾಮಿಯವರ ಆಡಳಿತ ವೈಖರಿ ಬೇಸತ್ತು ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೆ, ಅದೊಂದೆ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಂದುಕೊಳ್ಳುವಂತಿಲ್ಲ. ಹೀಗಾಗಿಯೇ ಸ್ಪೀಕರ್‌ ರಮೇಶ ಕುಮಾರ ಅನರ್ಹಗೊಳಿಸಿದ್ದಾರೆ. ಅವರ ನಿರ್ಧಾರ ತಪ್ಪಿಲ್ಲ.

–ಎಚ್‌.ಎಸ್‌. ನಾಗರಾಜ, ಹೋಸಪೇಟೆ

ವಿಜಯನಗರ ಜಿಲ್ಲೆ ಮಾಡಬೇಕೆಂಬ ಆನಂದ್‌ ಸಿಂಗ್‌ ಅವರ ಆಸೆ ಕೈಗೂಡಲಿಲ್ಲ. ಯಾರೊಬ್ಬರೂ ಅವರಿಗೆ ಸಹಕಾರ ಕೊಡಲಿಲ್ಲ. ಹೀಗಾಗಿ ಮನನೊಂದು ಅವರು ರಾಜೀನಾಮೆ ನೀಡಿದ್ದಾರೆ. ಕುತಂತ್ರ ರಾಜಕಾರಣದ ಭಾಗವಾಗಿ ಸ್ಪೀಕರ್‌ ಅವರನ್ನು ಅನರ್ಹಗೊಳಿಸಿದ್ದಾರೆ.
–ಭೂಪಾಳ್‌ ರಾಮಣ್ಣ, ಹೊಸಪೇಟೆ

ADVERTISEMENT

ಇತರೆ ಅತೃಪ್ತ ಶಾಸಕರ ವಿಚಾರದಲ್ಲಿ ಸ್ಪೀಕರ್ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ. ಆದರೆ, ಆನಂದ್‌ ಸಿಂಗ್‌ ಜಿಂದಾಲ್‌ ಭೂ ಪರಭಾರೆ, ವಿಜಯನಗರ ಜಿಲ್ಲೆ ಮಾಡಬೇಕೆಂದು ರಾಜೀನಾಮೆ ಕೊಟ್ಟಿದ್ದರು. ಅವರನ್ನು ಅನರ್ಹಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
–ಹಂಡಿ ಜೋಗಿ ಶಿವು, ಕಮಲಾಪುರ

ಶಾಸಕರನ್ನು ಅನರ್ಹಗೊಳಿಸಿರುವುದು ರಾಜಕಾರಣಿಗಳಿಗೆ ಒಂದು ತಕ್ಕ ಪಾಠ. ಹಣ, ಅಧಿಕಾರದ ಆಸೆಗಾಗಿ ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದ್ದಾರೆ. ಸ್ಪೀಕರ್‌ ನಿರ್ಧಾರ ಉತ್ತಮವಾದುದು. ಭವಿಷ್ಯದಲ್ಲಾದರೂ ಈ ರೀತಿ ಆಗಬಾರದು.
–ಮಹಾಂತೇಶ ಗೆದ್ದಲಹಟ್ಟಿ, ಹಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.