ADVERTISEMENT

ಸಲಾಂ ಬಳ್ಳಾರಿ: 7ನೇ ವಾರ್ಡ್‌ ಅಭಿವೃದ್ಧಿಗೆ ₹4 ಕೋಟಿ ಮಂಜೂರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:24 IST
Last Updated 30 ಮೇ 2025, 16:24 IST
ಸಲಾಂ ಬಳ್ಳಾರಿ ಅಭಿಯಾನದ ಭಾಗವಾಗಿ ಶಾಸಕ ನಾರಾ ಭರತ್‌ ರೆಡ್ಡಿ ಶುಕ್ರವಾರ ಬಳ್ಳಾರಿ ನಗರದ 7ನೇ ವಾರ್ಡ್‌ನಲ್ಲಿ ಪರಿಶೀಲನೆ ಕೈಗೊಂಡರು
ಸಲಾಂ ಬಳ್ಳಾರಿ ಅಭಿಯಾನದ ಭಾಗವಾಗಿ ಶಾಸಕ ನಾರಾ ಭರತ್‌ ರೆಡ್ಡಿ ಶುಕ್ರವಾರ ಬಳ್ಳಾರಿ ನಗರದ 7ನೇ ವಾರ್ಡ್‌ನಲ್ಲಿ ಪರಿಶೀಲನೆ ಕೈಗೊಂಡರು   

ಬಳ್ಳಾರಿ: ವಾರ್ಡ್‌ಗಳಲ್ಲಿರುವ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

‘ಸಲಾಂ ಬಳ್ಳಾರಿ’ ಅಭಿಯಾನದ ಭಾಗವಾಗಿ ಶಾಸಕ ನಾರಾ ಭರತ್‌ ರೆಡ್ಡಿ ಶುಕ್ರವಾರ ಬೆಳಿಗ್ಗೆ ನಗರದ 7ನೇ ವಾರ್ಡ್‌ನ ಬಾಪೂಜಿ ನಗರ ಹಾಗೂ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಜನರ ಸಮಸ್ಯೆ ಆಲಿಸಿದರು.

‘ಚರಂಡಿ, ಒಳ ಚರಂಡಿ, ರಸ್ತೆ, ಕುಡಿಯುವ ನೀರು, ನೈರ್ಮಲ್ಯ ಸೇರಿದಂತೆ ಮೂಲಸೌಕರ್ಯಗಳನ್ನು ಪೂರೈಸಲು ಅಧಿಕಾರಿ, ಸಿಬ್ಬಂದಿ ಶ್ರಮಿಸಬೇಕು’ ಎಂದರು.

ADVERTISEMENT

ವಾರ್ಡ್‌ನಲ್ಲಿ ಇಡೀ ದಿನ ಸಂಚರಿಸಿದ ನಂತರ ವಿವಿಧ ಪ್ರದೇಶಗಳ ಅಭಿವೃದ್ಧಿಗಾಗಿ ಅಂದಾಜು ₹7 ಕೋಟಿ ಮಂಜೂರಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, 7ನೇ ವಾರ್ಡ್‌ ಪಾಲಿಕೆ ಸದಸ್ಯೆ ಉಮಾದೇವಿ, ಮಾಜಿ ಮೇಯರ್ ಎಂ.ರಾಜೇಶ್ವರಿ, ಎಂ.ಪ್ರಭಂಜನಕುಮಾರ್, ಮಿಂಚು ಸೀನಾ, ರಾಮಾಂಜನೇಯ, ವಿಷ್ಣು ಬೋಯಪಾಟಿ, ಶಿವರಾಜ್, ಭರತ್, ಎಂ.ಸುಬ್ಬರಾಯುಡು, ಕೆ. ಶ್ರೀನಿವಾಸ್, ಬಿಆರೆಲ್ ಸೀನಾ, ಚಾನಾಳ್ ಶೇಖರ್, ಚಂಪಾ ಚವ್ಹಾಣ್, ಹುಸೇನ್ ಪೀರಾಂ, ಕುಡಿತಿನಿ ರಾಮಾಂಜನೇಯ, ಥಿಯೇಟರ್ ಶಿವು, ಬುಜ್ಜಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.